ಸಿಂದಗಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

710

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕುಳಕುಮಟ್ಟಗಿ ಹತ್ತಿರದ ಕ್ಯಾನಲ್ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 30 ವರ್ಷದ ಮಹಿಳೆ ಅಂತಾ ಹೇಳಲಾಗ್ತಿದೆ.

ನಗ್ನ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದ್ದು, ಏಳೆಂಟು ದಿನದ ಹಿಂದೆ ಹತ್ಯೆಗೈದು ಕ್ಯಾನಲ್ ನಲ್ಲಿ ಎಸೆದು ಹೋಗಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಅಲ್ದೇ ಹತ್ಯೆ ಮಾಡಿ ನದಿಯಲ್ಲಿ ದೇಹವನ್ನ ಎಸೆದಿದ್ದು ತೇಲಿಕೊಂಡು ಬಂದಿರಬಹುದು ಅನ್ನೋ ಅನುಮಾನ ಸಹ ಇದೆ. ಆದ್ರೆ, ಎಲ್ಲಿಂದ ಬಂದಿದೆ, ಏನು ಅನ್ನೋದು ಇನ್ನು ತಿಳಿದು ಬಂದಿಲ್ಲ. ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!