ಮದುವೆಗೂ ಮೊದ್ಲು ಡಿಪ್ಪಿ ಆ ನಟನಿಂದ ಎರಡು ಬಾರಿ ಮೋಸ ಹೋಗಿದ್ದಾಳೆ..

404

ಬಾಲಿವುಡ್ ಅಂಗಳದ ಬಹುಬೇಡಿಕೆ ನಟಿ ಅಂದ್ರೆ ದೀಪಿಕಾ ಪಡುಕೋಣೆ. ಪ್ರತಿಯೊಂದು ಪಾತ್ರಗಳಿಗೂ ಸೈ ಎನ್ನುವ ನಟಿ ಮದುವೆಗೂ ಮೊದಲಿನ ಕೆಲ ಕಹಿ ಘಟನೆಗಳನ್ನ ಹೇಳಿಕೊಂಡಿದ್ದಾಳೆ. ಬಿಟೌನ್ ಸ್ಟಾರ್ ನಟನೊಂದಿಗೆ ದೀಪಿಕಾ ಪ್ರೀತಿ, ಪ್ರೇಮ ಎಂದು ಸುತ್ತಾಡಿದ್ಳು. ಆತನೊಂದಿಗೆ ಮದ್ವೆಯಾಗ್ತಾಳೆ ಅನ್ನುವಷ್ಟರಲ್ಲಿ ಅದು ಬ್ರೇಕಪ್ ಆಯ್ತು.

ದೇಹ ಸಂಬಂಧ ಬರೀ ದೇಹಕ್ಕಷ್ಟೇ ಸಂಬಂಧಿಸಿಲ್ಲವೆಂದು ನಟಿ ದೀಪಿಕಾ ಹೇಳಿದ್ದಾಳೆ. ಅದು ಮನಸ್ಸಿಗೂ ಸಂಬಂಧಿಸಿರುತ್ತೆ ಎಂದು ಕಣ್ಣೀರು ಹಾಕಿದ್ದಾಳೆ. ಅಂದ್ರೆ, ಈಕೆಯ ಮಾಜಿ ಲವ್ವರ್ ನಿಂದ ಮೋಸ ಹೋಗಿದ್ಳು ಅನ್ನೋದನ್ನ ಹೇಳಿಕೊಂಡಿದ್ದಾಳೆ. ಆತನಿಗೆ ಎರಡು ಬಾರಿ ಚಾನ್ಸ್ ಕೊಟ್ಟಿದ್ದಳಂತೆ. ಆ ನಟ ಸಾಕಷ್ಟು ಬೇಡಿಕೊಂಡ್ಮೇಲೆ ಕ್ಷಮಿಸಿದ್ದೆ ಎಂದು ಡಿಪ್ಪಿ ಹೇಳಿದ್ದಾಳೆ.

ರಣವೀರ ಸಿಂಗ್ ಜೊತೆ ಮದ್ವೆಯಾಗಿ ಖುಷಿ ಖುಷಿಯಾಗಿರುವ ನಟಿ, ತನ್ನ ಹೊಸ ಚಿತ್ರ ಚಪಾಕ್ ಪ್ರಮೋಷನ್ ಟೈಂನಲ್ಲಿ ಹಿಂದಿನ ಕಹಿ ಘಟನೆಗಳನ್ನ ನೆನಪು ಮಾಡಿಕೊಂಡಿದ್ದಾಳೆ. ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಅಷ್ಟಕ್ಕೂ ದೀಪಿಕಾ ಪಡುಕೋಣೆ ಯಾರಿಂದ ತಾನು ಮೋಸ ಹೋಗಿದ್ದೇನೆ ಅನ್ನೋದನ್ನ ಹೇಳಿಲ್ಲ. ಆದ್ರೆ, ಬಾಲಿವುಡ್ ಮಂದಿ ಬೊಟ್ಟು ಮಾಡ್ತಿರುವುದು ರಣಬೀರ ಕಪೂರ್ ಕಡೆ. ದೀಪಿಕಾ ಹಾಗೂ ರಣಬೀರ ಕಪೂರ್ ಒಂದು ಕಾಲದ ಜೋಡಿ ಹಕ್ಕಿಗಳು.

ಮೊದಲ ಬಾರಿಗೆ ಆತ ಮೋಸ ಮಾಡಿದಾಗ ಬಹುಶಃ ನನ್ನಿಂದಲೂ ಏನೋ ತಪ್ಪಾಗಿದೆ ಎಂದುಕೊಂಡಿದ್ದೆ. ಆದ್ರೆ, ನಮ್ಮ ಜೊತೆಗಿರುವವರು ಅದನ್ನೇ ಹಾಬಿ ಮಾಡಿಕೊಂಡ್ರೆ ಹೇಗೆ ಎಂದಿರುವ ನಟಿ ಮಾತಿನ ಅರ್ಥ, ನಟ ರಣಬೀರ ಕಪೂರ್ ಹೂವಿನಿಂದ ಹೂವಿಗೆ ಹಾರು ದುಂಬಿ ಎಂದು ಹೇಳಿದಂತಿದೆ. ಗೌರವ, ನಂಬಿಕೆ ಇಲ್ಲದಿದ್ರೆ ಏನನ್ನೂ ಮಾಡಲು ಸಾಧ್ಯವಿಲ್ಲವೆಂದು ತುಂಬಾ ಬೇಸರಿಂದ ಹೇಳಿದ್ದಾಳೆ.




Leave a Reply

Your email address will not be published. Required fields are marked *

error: Content is protected !!