ಸಿಂದಗಿಯಲ್ಲಿ ವ್ಯಕ್ತಿಯ ಶವ ಪತ್ತೆ

462

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಸಿಂದಗಿ-ವಿಜಯಪುರ ರಸ್ತೆಯ ಸ್ಮಶಾನದ ಹತ್ತಿರ ಶವ ಪತ್ತೆಯಾಗಿದ್ದು ಹುಸೇನಸಾಬ ಎಂ ನದಾಫ(46) ಮೃತ ವ್ಯಕ್ತಿಯೆಂದು ತಿಳಿದು ಬಂದಿದೆ.

ಹೃದಯಾಘಾತವಾಗಿ ಸತ್ತಿರಬಹುದು ಅನ್ನೋ ಸಂಶಯವನ್ನು ಜನ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿ ಗಣಿಯಾರ ಮೂಲದ ನಿವಾಸಿ ಎಂದು ಹೇಳಲಾಗ್ತಿದೆ. ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!