ವರದಕ್ಷಿಣೆ ಹಿಂಸೆಗೆ ಐಪಿಎಸ್ ಅಧಿಕಾರಿಯೇ ಠಾಣೆ ಮೆಟ್ಟಿಲು ಏರಿದರು..

309

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವರದಕ್ಷಿಣೆ ಕಿರುಕುಳ ಇಂದಿಗೂ ಜೀವಂತವಾಗಿರುವುದೇ ದೊಡ್ಡ ಪೀಡುಗು. ಸಾಮಾನ್ಯ ಜನರಲ್ಲಿ ಇದು ಕಾಣಿಸುವುದು ಅಲ್ಲಲ್ಲಿ ಕೇಳಿದ್ದೇವೆ. ನೋಡಿದ್ದೇವೆ. ಇದೀಗ ಈ ಪೀಡುಗು ಐಪಿಎಸ್ ಅಧಿಕಾರಿಯನ್ನ ಸಹ ಬಿಟ್ಟಿಲ್ಲ. ಐಎಫ್ಎಸ್ ಅಧಿಕಾರಿ ಪತಿ ವಿರುದ್ಧ ದೂರು ನೀಡಿದ್ದಾರೆ.

ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಇದೀಗ ತಮ್ಮ ಪತಿ ಐಎಫ್ಎಸ್ ಅಧಿಕಾರಿ ನಿತಿನ ಸುಭಾಷ ಹಾಗೂ ಅವರ ಕುಟುಂಬದ 7 ಜನರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ವರ್ತಿಕಾ ಹಾಗೂ ನಿತಿನ 2011ರಲ್ಲಿ ಮದುವೆಯಾಗಿದ್ದಾರೆ. ಪತಿ ತಮ್ಗೆ ವರದಕ್ಷಿಣೆಗಾಗಿ ಕಿರುಕುಳ ನೀಡ್ತಿದ್ದಾರೆ. ದೈಹಿಕ ಹಿಂಸೆ ನೀಡಿದ್ದಾರೆ. ಅಲ್ದೇ, ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರ್ತಿಕಾ ದೂರಿನಲ್ಲಿ ತಿಳಿಸಿದ್ದಾರೆ. ಐಪಿಎಸ್ ಅಧಿಕಾರಿಯನ್ನೇ ವರದಕ್ಷಿಣೆ ಕಿರುಕುಳ ಬಿಡುತ್ತಿಲ್ಲವೆಂದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!