ವಿದ್ಯುತ್ ಬಿಲ್ ನೋಡಿ ರಾಜ್ಯದ ಜನತೆ ಆಕ್ರೋಶ

221

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ ಸರ್ಕಾರ, ಕಳೆದ ತಿಂಗಳು ಬಿಲ್ ಎರಡರಿಂದ ಮೂರು ಪಟ್ಟು ಹೆಚ್ಚಿಗೆ ಆಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಾಸರಿ 300 ರೂಪಾಯಿಯಿಂದ 400 ರೂಪಾಯಿ ತನಕ ಬರುತ್ತಿದ್ದ ಬಿಲ್ ಏಕಾಏಕಿ 2 ಸಾವಿರ ರೂಪಾಯಿ ತನಕ ಬಂದಿದೆ ಎಂದು ಬಾಗಲಕೋಟೆಯ ಜನರ ಸಿಡಿದೆದ್ದಿದ್ದಾರೆ.

ವಿಜಯಪುರ ಜಿಲ್ಲೆಯಲ್ಲೂ ಇದೆ ರೀತಿಯಾಗಿದೆ. 600, 800, 1000 ರೂಪಾಯಿ ಬಿಲ್ ಬರುತ್ತಿದ್ದವರಿಗೆ 2 ಸಾವಿರ, 3 ಸಾವಿರಕ್ಕೂ ಅಧಿಕ ಬಿಲ್ ಬಂದಿದೆ. ದುಪ್ಪಟ್ಟು ಬಿಲ್ ನೋಡಿದ ಜನರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿ, ಹಿಂದಿನ ಬಿಲ್ ನಲ್ಲಿ ಮೂರು ಪಟ್ಟು ವಸೂಲಿ ಮಾಡಲಾಗುತ್ತಿದೆ ಅಂತಾ ಕಿಡಿ ಕಾರುತ್ತಿದ್ದಾರೆ.

ಕೆಲವರು ಇದು ಏಪ್ರಿಲ್ ತಿಂಗಳಿಂದ ಹೆಚ್ಚಿಗೆ ಆದ ಬಿಲ್ ಇದೆ. ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ಬಿಲ್ ಹೆಚ್ಚಿಗೆ ಮಾಡಿದೆ. ನಂತರ ನೀತಿ ಸಂಹಿತೆ ಬಂದು ಅರ್ಧಕ್ಕೆ ನಿಂತಿತ್ತು. ಈಗ ಹೆಚ್ಚಿಗೆ ಆದ ದರದ ಬಿಲ್ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಆರಂಭದಲ್ಲಿಯೇ ಕಾಂಗ್ರೆಸ್ ಸರ್ಕಾರಕ್ಕೆ ವಿಘ್ನ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!