ಪಾಕ್ ಮಾಜಿ ಅಧ್ಯಕ್ಷ ಮುಷರಪ್ ಆರೋಗ್ಯ ಗಂಭೀರ

176

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ನವದೆಹಲಿ: ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಪ್(78) ನಿಧನರಾಗಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಇದನ್ನು ತಳ್ಳಿ ಹಾಕಿರುವ ಕುಟುಂಬಸ್ಥರು, ಅವರು ಬದುಕಿದ್ದಾರೆ. ಆದರೆ, ಆರೋಗ್ಯ ಸ್ಥಿತಿ ತುಂಬಾ ಕ್ಷಿಣಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅವರು ವೆಂಟಿಲೇಟರ್ ಮೇಲೆ ಇಲ್ಲ. ಕಳೆದ 3 ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಉಳಿಯುವ ಸಾಧ್ಯತೆ ಕಡಿಮೆ ಇದೆ ಎಂದಿರುವ ಕುಟುಂಬಸ್ಥರು ಅವರಿಗೆ ಪ್ರಾರ್ಥನೆ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ಪಾಕಿಸ್ತಾನ ಮಾಧ್ಯಮ ಸೇರಿದಂತೆ ಅನೇಕ ಕಡೆ ಮುಷರಪ್ ನಿಧನರಾಗಿದ್ದಾರೆ ಎಂದು ವರದಿ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!