ಗುಮ್ಮಟನಗರಿಯಲ್ಲೊಬ್ಬ ದಾಹ ನೀಗಿಸುವ ಹೃದಯವಂತ

421

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಬೇಸಿಗೆ ಶುರುವಾಯ್ತು ಅಂದ್ರೆ ಸಾಕು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸೂರ್ಯನ ಆರ್ಭಟ ಶುರು. ಮುಂಜಾನೆ 9 ಗಂಟೆ ಆಗಿರಲ್ಲ ಆಗ್ಲೇ ಚುರುಚುರು ಬಿಸಿಲು ಶುರುವಾಗುತ್ತೆ. ಸಂಜೆ 6 ಗಂಟೆಯಾದ್ರೂ ಬಿಸಿಲಿನ ತಾಪ ಕಡಿಮೆಯಾಗುವುದಿಲ್ಲ. ಹೀಗಾಗಿ ಜನರು ತಂಪು ಪಾನಿಯಗಳ ಮೊರೆ ಹೋಗ್ತಾರೆ. ನೀರು ಪದೆಪದೆ ಕುಡಿಯಲೇಬೇಕು.

ಈಗಾಗ್ಲೇ ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಸಾರ್ವಜನಿಕರು ಸೇರಿದಂತೆ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತವೆ. ಕೆಲಸದ ನಿಮಿತ್ತ ಹೊರಗೆ ಬಂದ್ರೆ ನೀರಿಗಾಗಿ ಅಲೆದಾಟ ಸಾಮಾನ್ಯ. ಇದನ್ನು ಮನಗಂಡಿರುವ ಬಸಪ್ಪ ಮರಳಪ್ಪ ಮನವರ ಅನ್ನೋ ವ್ಯಕ್ತಿ, ದಾಹ ತಣಿಸುವ ಮಾನವೀಯ ಕೆಲಸ ಮಾಡುತ್ತಿದ್ದಾರೆ.

ಬಬಲೇಶ್ವರದ ಬಸಪ್ಪ ಮರಳಪ್ಪ ಮನವರ ಅನ್ನೋ ವ್ಯಕ್ತಿ, ಪ್ರತಿ ನಿತ್ಯ ದಾರಿಹೋಕರಿಗಾಗಿ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸಿ ಅವುಗಳನ್ನ ತುಂಬಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಪಟ್ಟಣದ ಹಲವು ಭಾಗಗಳಲ್ಲಿ ಅರವಟ್ಟಿಗೆಗಳನ್ನು ಸ್ಥಾಪಿಸಿ, ಮಡಿಕೆಗಳನ್ನು ಇಟ್ಟು ನೀರು ತಂಪಾಗಿಸಲು ತಟ್ಟು(ಗೋಣಿ ಚೀಲ) ಕಟ್ಟಿ ಮೂರು ಹೊತ್ತು ನೀರು ತುಂಬುತ್ತಿದ್ದಾರೆ. ಇದು ನಿನ್ನೆ, ಮೊನ್ನೆಯ ಕೆಲಸವಲ್ಲ. ಬರೋಬ್ಬರಿ 30 ವರ್ಷಗಳಿಂದ ಬೇಸಿಗೆಯಲ್ಲಿ ಮಾನವೀಯ ಕೆಲಸ ಮಾಡುತ್ತಿದ್ದಾರೆ.

ಮನೆಗೆ ಬಂದವರಿಗೆ ನೀರು ಕೊಡುವ ಕಾಲ ಕಣ್ಮರೆಯಾಗ್ತಿದೆ. ಹೋಟೆಲ್ ಗೆ ಹೋದ್ರೆ ಹಣ ಕೊಟ್ಟರೆ ನೀರು. ಇಲ್ಲವಾದ್ರೆ ಇಲ್ಲ. ಇಂತಹ ಸಂದರ್ಭದಲ್ಲಿ ಉಚಿತವಾಗಿ ನಿತ್ಯ ನೂರಾರು ಜನಕ್ಕೆ ನೀರು ಒದಗಿಸ್ತಿರುವ ಬಸಪ್ಪ ಮರಳಪ್ಪ ಮನವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು. ಇವರ ಸೇವೆಗೆ ಪಟ್ಟಣದ ಜನತೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!