ಭಾವೈಕ್ಯತೆಯಲ್ಲಿದೆ ಭಾರತದ ಅಸ್ಮಿತೆ

894

ಸಿಂದಗಿ: ನಾಡಿನಲ್ಲೆಡೆ ಗಣೇಶ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗ್ತಿದೆ. ಸಾರ್ವಜನಿಕವಾಗಿ ಗಣೇಶನನ್ನ ಪ್ರತಿಷ್ಠಾಪಿಸಿ ಪೂಜೆ ಮಾಡ್ತಿರುವುದರ ಹಿಂದೆ ಬಹುದೊಡ್ಡ ಇತಿಹಾಸವಿದೆ. ಇಲ್ಲಿ ಯಾವ ಜಾತಿ, ಧರ್ಮದ ಮಡಿವಂತಿಕೆಯಿಲ್ಲ. ಎಲ್ಲರೂ ಏಕಮನಸ್ಸಿನಿಂದ ಏಕದಂತನನ್ನ ಪೂಜಿಸುವುದಾಗಿದೆ. ಹೀಗಾಗಿ ಅನೇಕ ಕಡೆ ಕೋಮುಸೌಹಾರ್ದತೆ ಸಾರುವ ಗಣೇಶೋತ್ಸವ ನಡೆಯುತ್ತಿವೆ.

ಅದೇ ರೀತಿ ಸಿಂದಗಿ ಪಟ್ಟಣದ ಸೋಮಲಿಂಗೇಶ್ವರ ಗಜಾನನ ಯುವಕ ಮಂಡಳಿಯ ಮುಂದೆ ತೆಗೆದಿರುವ ಫೋಟೋ ಸಾಕಷ್ಟು ವೈರಲ್ ಆಗ್ತಿದೆ. ಹಿಂದೂ-ಮುಸ್ಲಿಂ ಗೆಳೆಯರಿಬ್ಬರು ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ. ಮಂಜು ಬಿರಾದಾರ ಹಾಗೂ ಶಕೀಲ ವಾಲೀಕಾರ ಸ್ನೇಹಿತರ ಫೋಟೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ಸಾರ್ವಜನಿಕ ಗಣೇಶೋತ್ಸವ ಕಲ್ಪನೆ ಹಿಂದೆ ತಿಲಕರು

ಸಾರ್ವಜನಿಕ ಗಣೇಶೋತ್ಸವ ಪರಿಕಲ್ಪನೆ ಕಟ್ಟಿಕೊಟ್ಟಿದ್ದು ಸ್ವತಂತ್ರ ಹೋರಾಟಗಾರ ಲೋಕಮಾನ್ಯ ತಿಲಕರು. ಬ್ರಿಟಿಷರ ವಿರುದ್ಧ ಹೋರಾಡಲು ದೇಶದ ಜನತೆಯನ್ನ ಒಂದ್ಕಡೆ ಸೇರಿಸುವುದು ತುಂಬಾ ಕಷ್ಟವೆನ್ನುವುದನ್ನ, ಅವರು ಹಳ್ಳಿ ಹಳ್ಳಿ ಸುತ್ತಾಡಿದಾಗ ತಿಳಿದುಕೊಂಡಿದ್ರು. ಆಗ ಅವರಿಗೆ ಹೊಳೆದಿದ್ದು ಸಾರ್ವಜನಿಕ ಗಣೇಶ ಉತ್ಸವ. ಎಲ್ಲ ಧರ್ಮದವರು ಸೇರಿಕೊಂಡು ಸಾರ್ವಜನಿಕ ಗಣೇಶೋತ್ಸವದ ಜೊತೆಗೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ರೂಪರೇಷಗಳನ್ನ ತಿಳಿಸಲು ಅಡಿಗಲ್ಲು ನೆಟ್ಟರು.

ತಿಲಕರ ಒಂದು ಆಲೋಚನೆ ನಾವೆಲ್ಲ ಒಂದು ಅನ್ನೋ ಸಂದೇಶ ಸಾರಿತು. ಕಾಲಾಂತರದಲ್ಲಿ ರಾಜಕೀಯ ದಾಳಿಗೆ ಸಿಕ್ಕು ಎರಡು ಧರ್ಮಗಳ ನಡುವೆ ಬಿರುಕು ಮೂಡಿತು. ಆದ್ರೂ, ಈ ನೆಲದ ಅನೇಕ ಕಡೆ ಇಂದಿಗೂ ಕೋಮಸೌಹಾರ್ದತೆ ಸಾರುವ ಇಂಥಾ ಆಚರಣೆ ನಡೆಯುತ್ತಲೇ ಇವೆ. ಇದು ಎಲ್ಲೆಡೆ ಮತ್ತೆ ಮುಂದುವರೆಯಲಿ ಅನ್ನೋದು ಎಲ್ಲರ ಆಶಯ.




Leave a Reply

Your email address will not be published. Required fields are marked *

error: Content is protected !!