ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಷರತ್ತುಗಳು ಅನ್ವಯ

391

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇದೀಗ ಗಣೇಶ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಆದ್ರೆ, ಈ ಬಾರಿ ಕರೋನಾ ಹಾವಳಿಯಿಂದಾಗಿ ಅದ್ಧೂರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿಲ್ಲ. ಬದಲಾಗಿ ಒಂದಿಷ್ಟು ಷರತ್ತುಗಳನ್ನ ವಿಧಿಸಿ ರಾಜ್ಯ ಸರ್ಕಾರ ಅವಕಾಶ ನೀಡಿದೆ.

ಗಣೇಶೋತ್ಸವ ಆಚರಣೆ ಸಂಬಂಧ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ನಿಯಮಗಳು ಹೀಗಿವೆ..

ಮನೆಯಲ್ಲಿ, ಸರ್ಕಾರಿ, ಖಾಸಗಿ ಅಥವ ಸಾರ್ವಜನಿಕ ಪ್ರದೇಶಗಳಲ್ಲಿ ಕನಿಷ್ಟ ಸಂಖ್ಯೆಯೊಂದಿಗೆ ಆಚರಣೆ

ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ, ಮನೆಗಳಲ್ಲಿ 2 ಅಡಿ ಎತ್ತರ ಮೀರದಂತೆ ಗಣೇಶಮೂರ್ತಿ ಪ್ರತಿಷ್ಠಾಪನೆ

ಪಾರಂಪರಿಕ ಗಣೇಶ ಸಮಿತಿಗಳು, ಮಂಡಳಿಗಳು ಮುನಿಷಿಪಲ್ ಕಾರ್ಪೂರೇಷನ್, ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯಬೇಕು

ವಾರ್ಡಿಗೆ ಒಂದು, ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ

20ಕ್ಕಿಂತ ಹೆಚ್ಚು ಜನರಿಗೆ ಸೀಮಿತ ಆವರಣ, 20ಕ್ಕಿಂತ ಹೆಚ್ಚಿನ ಸಂಖ್ಯೆಯ ಭಕ್ತರನ್ನ ಏಕಕಾಲದಲ್ಲಿ ಬಿಡಬಾರದು

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಮನರಂಜನೆಗೆ ಅವಕಾಶವಿಲ್ಲ

ಇನ್ನು ಗಣೇಶಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ಟೈಂನಲ್ಲಿ ಮೆರವಣಿಗೆ ನಿರ್ಬಂಧ

ಮೂರ್ತಿ ವಿಸರ್ಜನೆ ಟೈಂನಲ್ಲಿ ಸರ್ಕಾರ ನಿರ್ಮಿಸಿದ ಹೊಂಡ, ಮೊಬೈಲ್ ಟ್ಯಾಂಕ್, ಕೃತಕ ವಿಸರ್ಜನಾ ಟ್ಯಾಂಕ್ ಬಳಕೆ. ಮನೆಯಲ್ಲಿ ವಿಸರ್ಜನೆ ಮಾಡುವವರು ಮಾಡಬಹುದು

ಇದು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ನಿಯಮಗಳಾಗಿವೆ. ಪರಿಸರ ಸ್ನೇಹಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕರೋನಾ ಮಾರ್ಗಸೂಚಿಗಳನ್ನ ಪಾಲಸಬೇಕಿದೆ.




Leave a Reply

Your email address will not be published. Required fields are marked *

error: Content is protected !!