ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಯುವತಿಯೊಬ್ಬಳು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಚಳ್ಳಕೆರೆ ತಾಲೂಕಿನ ಹೊಸೂರ ತಾಂಡಾದ ಬಳಿ ನಡೆದಿದೆ. ರೇಖಲಗೆರೆ ಗ್ರಾಮದ 22 ವರ್ಷದ ಮಾನಸ ಮೃತ ಯುವತಿಯಾಗಿದ್ದಾಳೆ.
ಹೊಸೂರ ತಾಂಡಾದ ಬಳಿ ಮಾನಸ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಯುವತಿ ಮೃತದೇಹದ ಪಕ್ಕದಲ್ಲಿ ಚಾಕು ಹಾಗೂ ಆ್ಯಸಿಡ್ ಬಾಟಲ್ ಪತ್ತೆಯಾಗಿದೆ. ಮೃತ ಯುವತಿ ಚಳ್ಳಕೆರೆಯ ಅಂಚೆ ಕಚೇರಿಯಲ್ಲಿ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಆಗಿದ್ರು. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಿಂದ ಸತ್ಯ ಹೊರಬರಬೇಕಿದೆ.