ಕಾಟಾಚಾರದ ಗ್ರಾಮ ವಾಸ್ತವ್ಯ

546

ಪ್ರಜಾಸ್ತ್ರ ಸುದ್ದಿ

ಅಳ್ನಾವರ: ಜಿಲ್ಲಾಧಿಕಾರಿಗಳ ನಡೆ ಗ್ರಾಮ ಗ್ರಾಮದ ಕಡೆಗೆ ಅನ್ನೋ ಧ್ಯೆಯ ವಾಕ್ಯದೊಂದಿಗೆ ತಾಲೂಕಿನ ಬೆನಚಿ ಗ್ರಾಮದಲ್ಲಿ ಸೋಮವಾರ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ತಹಸೀಲ್ದಾರ್ ಅಮರೇಶ ಪಮ್ಮಾರ ಅವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿ ವೀಕ್ಷಣೆ ಮಾಡಿ, ಧಾನ್ಯಗಳ ವಿವರಣೆ ಬಗ್ಗೆ ಚರ್ಚಿಸಿದರು. ನಂತರ ಗ್ರಾಮ್ ಒನ್ ಇಂಡಿಯಾ ನಾಗರಿಕ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸ್ಥಳದಲ್ಲಿಯೇ ಸಾರ್ವಜನಿಕರ ಕೆಲಸಗಳನ್ನ ಬಗೆ ಹರಿಸುವುದು ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.

ಇಡೀ ದಿನ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಜನರ ಕುಂದುಕೊರತೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕಿತ್ತು. ಆದರೆ, ತಹಶೀಲ್ದಾರ್ ಅಮರೇಶ್ ಪಮ್ಮಾರ ಅವರು ಹೀಗೆ ಬಂದು ಹಾಗೇ ಹೋದರು ಎನ್ನುವಂತೆ ಸ್ವಲ್ಪ ಹೊತ್ತು ಇದ್ದು ಹೊರಟು ಹೋದರು. ಅಲ್ಲದೆ, ಸುಮಾರು 25 ವಿವಿಧ ಇಲಾಖೆ ಅಧಿಕಾರಿಗಳ ಬರಬೇಕಾಗಿತ್ತು. ಆದರೆ ಕೇವಲ 18 ಇಲಾಖೆ ಅಧಿಕಾರಿಗಳು ಮಾತ್ರ ಹಾಜರಿದ್ದರೂ ಜನರ ಸಮಸ್ಯೆಗೆ ಸರಿಯಾದ ಪರಿಹಾರ ಸಿಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.




Leave a Reply

Your email address will not be published. Required fields are marked *

error: Content is protected !!