ನಟ ಪುನೀತಗೆ ಮರಣೋತ್ತರ ಡಾಕ್ಟರೇಟ್ ಪದವಿ

215

ಪ್ರಜಾಸ್ತ್ರ ಸುದ್ದಿ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಈ ಹಿಂದೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಹಲವು ಬಾರಿ ಕೇಳಿದರು ಅವರು ನಿಯವಾಗಿ ನಿರಾಕರಿಸಿದ್ದರು. ತಂದೆಗೆ ನೀಡಿದ ವಿವಿಯಿಂದ ಡಾಕ್ಟರೇಟ್ ಎಂದಾಗ, ಆ ಎತ್ತರಕ್ಕೆ ನಾನು ಬೆಳೆದಿಲ್ಲ. ಅವರದೆ ತೂಕ ಬೇರೆ. ನನ್ನದು ಬೇರೆ ಎಂದಿದ್ದರು ಎಂದು ಭಾವುಕವಾಗಿ ಹೇಳಿದರು.




Leave a Reply

Your email address will not be published. Required fields are marked *

error: Content is protected !!