ಹುಬ್ಬಳ್ಳಿಯಲ್ಲಿ 700 ಮನೆಗಳು ನೆಲಸಮ.. ಆಗಸ್ಟ್ 19ರ ವರೆಗೂ ಮಳೆ.. ಉ.ಕ ರಕ್ಷಣೆಗೆ ನೆರವಾಗಿ

357

ಹುಬ್ಬಳ್ಳಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಬ್ಬಳ್ಳಿಯಲ್ಲಿ ಈಗಾಗ್ಲೇ 700ಕ್ಕೂ ಹೆಚ್ಚು ಮನೆಗಳು ಬಿದ್ದಿದೆ. ಈಗಾಗ್ಲೇ 12 ಜನ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇದ್ರಿಂದಾಗಿ ಈ ಭಾಗದ ಜನರಲ್ಲಿ ಜೀವಭಯ ಕಾಡ್ತಿದೆ. ವರುಣ ಆರ್ಭಟಕ್ಕೆ ಅಕ್ಷರಶಃ ನಲುಗಿಹೋಗಿದ್ದಾರೆ.

ಎಲ್ಲಿ ನೋಡಿದ್ರೂ ನೀರು.. ನೀರು.. ಹೊಲ, ಗದ್ದೆಗಳು ಅನ್ನೋದು ನದಿಯಾಗಿ ಪರಿವರ್ತನೆಯಾಗಿವೆ. ಇದ್ರಿಂದಾಗಿ ಈ ಭಾಗದ ಜನರ ಬದುಕು ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಕಲಬುರಗಿ ಜಿಲ್ಲೆಗಳ ಜನರ ರಕ್ಷಣೆಗೆ ಸರ್ಕಾರ ಸಕಲ ರೀತಿಯಿಂದ ಕಾರ್ಯಾಚರಣೆಯನ್ನ ತುರ್ತಾಗಿ ನಡೆಸಬೇಕಾಗಿದೆ.

ಬೆಳಗಾವಿ ನಗರದಲ್ಲಿನ ಸ್ಥಿತಿ

ಸರ್ಕಾರದಿಂದ ಈಗ ಆಗ್ತಿರುವ ಕೆಲಸ ನಿಧಾನಾಗಿದ್ದು, ಇನ್ನಷ್ಟು ವೇಗ ಪಡೆದುಕೊಳ್ಳಬೇಕಿದೆ. ಹೀಗಾಗಿ ಪ್ರವಾಹಕ್ಕೆ ಸಿಲುಕಿರುವ ಜಿಲ್ಲೆಗಳ ಜನರ ಬಗ್ಗೆ ಜಿಲ್ಲಾಡಳಿತ ಇನ್ನೂ ಹೆಚ್ಚಿನ ರೀತಿಯಲ್ಲಿ ಕ್ರಮಗಳನ್ನ ತೆಗೆದುಕೊಳ್ಳಬೇಕಾಗಿದೆ. ಇದರ ಜೊತೆಗೆ ಸಂಘ ಸಂಸ್ಥೆಗಳು, ಎನ್ ಜಿಒಗಳು, ಇತರೆ ಸಂಘಟನೆಗಳು ಈ ಭಾಗದ ಜನರ ನೆರವಿಗೆ ಬರಬೇಕಿದೆ. ಯಾಕಂದ್ರೆ ಆಗಸ್ಟ್ 19ರ ವರೆಗೂ ಮಳೆ ಮುಂದುವರೆಯುವ ಸಾಧ್ಯತೆಯಿದ್ದು, ಪ್ರವಾಹದ ಭೀತಿ ಮುಂದುವರೆದಿದೆ. ಹೀಗಾಗಿ ಮುಂದಾಗುವ ಹಾನಿ ತಪ್ಪಿಸಲು ಎಲ್ಲರೂ ಸಹಕರಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!