ಹೋಳಿ ಹಬ್ಬ: ಮಕ್ಕಳ ಖುಷಿ ಜೊತೆಗೆ ರಕ್ಷಣೆ ಮುಖ್ಯ ಅಲ್ವೆ?

483

ನಾಳೆ ಹೋಳಿ ಆಡಲು ಮಕ್ಕಳು ಕಾತುರದಿಂದ ಕಾಯುತ್ತಿದ್ದಾರೆ. ನಾಳೆ ಇಡೀ ದಿನ ಬಣ್ಣದಲ್ಲಿಯೇ ಕುಣಿದು ಕುಪ್ಪಳಿಸಬೇಕು ಅಂದುಕೊಂಡಿದ್ದಾರೆ. ಆ ಮಕ್ಕಳ ಖುಷಿಯ ಜೊತೆಗೆ ಒಂದಿಷ್ಟು ರಕ್ಷಣೆ ಸಹ ಮುಖ್ಯ ಅಲ್ವೆ? ಹೀಗಾಗಿ ಪಾಲಕರು ಇದಿಷ್ಟನ್ನು ಪಾಲಿಸಿ..

ಮಕ್ಕಳ ಕೈಗೆ ಆದಷ್ಟು ನೈಸರ್ಗಿಕ ಬಣ್ಣ ನೀಡಿ

ಕಣ್ಣು, ಬಾಯಿ, ಕಿವಿಗೆ ಬಣ್ಣ ಎರಚದಂತೆ ನಿಮ್ಮ ಮಕ್ಕಳು ಹಾಗೂ ಅವರ ಸ್ನೇಹಿತರಿಗೂ ಹೇಳಿ

ಮಕ್ಕಳಿಗೆ ಸನ್ ಗ್ಲಾಸ್ ಇದ್ರೆ ಒಳ್ಳೆಯದು. ಕಣ್ಣಿಗೆ ಬಣ್ಣ ಬೀಳದಂತೆ ರಕ್ಷಣೆ ಪಡೆಯಬಹುದು

ವಾಟರ್ ಬಲೂನ್ ಗಳನ್ನ ತಲೆಗೆ ಹೊಡೆಯದಂತೆ ಹೇಳಿ. ಬೆನ್ನುಗೆ ಹೊಡೆಯುವುದು ಬೆಸ್ಟ್

ಮಕ್ಕಳ ತಲೆಗೆ ಸ್ಕಾರ್ಪ್ ಕಟ್ಟಿ ಕಳಿಸುವುದು ಉತ್ತಮ

ಕೊಬ್ಬರಿ ಎಣ್ಣೆ ಅಥವಾ ಆಲೀವ್ ಆಯಿಲ್ ನ್ನ ಮಕ್ಕಳ ಕೈ, ಕಾಲುಗಳಿಗೆ ಹಚ್ಚಿ. ಇದ್ರಿಂದ ಬಣ್ಣದ ತೂರಿಕೆಯಾಗುವುದಿಲ್ಲ. ಇದರ ಜೊತೆಗೆ ಕೊಬ್ಬರಿ ಎಣ್ಣೆಯನ್ನ ಹಿಂದಿನ ದಿನ ರಾತ್ರಿ ಹಾಗೂ ಬೆಳಗ್ಗೆ ತಲೆಗೆ ಹಚ್ಚಿ ಕಳಿಸಿ.

ಹಬ್ಬ ಮುಗಿದ್ಮೇಲೆ ಉಗುರು ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಹಾಕಿ ಸ್ನಾನ ಮಾಡಿಸಿ. ನಿಂಬೆ ರಸ ಹೆಚ್ಚಾದ್ರೆ ಮೈ ತುರಿಕೆ ಆಗುತ್ತೆ ಹುಷಾರ್.

ಕಲರ್ ಇನ್ನು ಉಳಿದುಕೊಂಡಿದ್ರೆ ಟೊಮೆಟೋ ಅಥವ ಪಪ್ಪಾಯಿ ಹಣ್ಣಿನಿಂದ ಮೈಯನ್ನ ಉಜ್ಜಿ, ತಣ್ಣೀರಿನಿಂದ ತೊಳೆಯಿರಿ.

ಹೀಗೆ ಮಕ್ಕಳಿಗೆ ಹೋಳಿ ಹಬ್ಬಕ್ಕೆ ಹೊರಗೆ ಕಳಿಸುವ ಮೊದ್ಲು ಹಿರಿಯರು ಇದಷ್ಟು ಈ ಕೆಲಸ ಮಾಡಿ ಕಳಿಸಿ. ಅಂದಾಗ ಕಣ್ಣು, ಕಿವಿ, ಬಾಯಿ, ತಲೆಗೆ ಹಾನಿಯಾಗದಂತೆ ನೋಡಿಕೊಳ್ಳಬಹುದು. ಇದರ ಜೊತೆಗೆ ಮಕ್ಕಳು ಸಹ ಖುಷಿ ಖುಷಿಯಾಗಿ ಬಣ್ಣದಾಟ ಆಡುತ್ತವೆ.




Leave a Reply

Your email address will not be published. Required fields are marked *

error: Content is protected !!