ಪ್ರಜಾಸ್ತ್ರ ಸುದ್ದಿ
ವಿಜಯಪುರ: ರಾಜ್ಯಾದ್ಯಂತ ಇಂದು ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಮಕ್ಕಳು, ಯುವಕ, ಯುವತಿಯರು ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಮಂಗಳವಾರ ರಾತ್ರಿ ಕಾಮ ದಹನ ನಡೆಸಲಾಗಿದ್ದು, ಮುಂಜಾನೆಯಿಂದ ಬಣ್ಣದಾಟ ನಡೆಸಲಾಗುತ್ತಿದೆ.
ಗುಮ್ಮಟನಗರಿ ತುಂಬಾ ಬಣ್ಣದ ಹಬ್ಬ ಜೋರಾಗಿದೆ. ನಗರ ಸೇರಿ ಜಿಲ್ಲೆಯ ಅನೇಕ ಕಡೆ ಹೋಳಿ ಹಬ್ಬದ ನಿಮಿತ್ತ ಸಾಮೂಹಿಕ ಬಣ್ಣದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೆಲವು ಕಡೆ ಉಚಿತ ವ್ಯವಸ್ಥೆ ಮಾಡಿದರೆ, ಇನ್ನು ಕೆಲವು ಕಡೆ ಟಿಕೆಟ್ ಆಧಾರದ ಮೇಲೆ ಇವೆಂಟ್ ಆಯೋಜಿಸಲಾಗಿದ್ದು, ಯುವ ಪಡೆ ಬಣ್ಣದಲ್ಲಿ ಮಿಂದೇಳು ಸಜ್ಜಾಗಿದೆ.