ಎಲ್ಲೆಡೆ ‘ರಂಗೇರಿದ’ ಹೋಳಿ ಹಬ್ಬ

112

ಪ್ರಜಾಸ್ತ್ರ ಸುದ್ದಿ

ಸಿಂದಗಿ: ನಾಡಿನ ತುಂಬಾ ಹೋಳಿ ಹಬ್ಬವನ್ನು ತುಂಬಾ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಇದೇ ರೀತಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಬಣ್ಣದ ಹಬ್ಬದ ಸಡಗರ ಜೋರಾಗಿದೆ.

ಭಾನುವಾರ ರಾತ್ರಿ ಕಣ್ಣನ ದಹನವಾಗಿದೆ. ಸೋಮವಾರ ಬಣ್ಣದ ಓಕುಳಿ ನಡೆದಿದೆ. ಚಳಿಗಾಲದ ಅಂತ್ಯ, ವಸಂತಕಾಲದ ಆಗಮನ ಎಂದು ಹೇಳಲಾಗುತ್ತೆ. ಹಿಂದೂ ಹಬ್ಬಗಳ ಆಚರಣೆಯಲ್ಲಿ ಇದು ಸಹ ತುಂಬಾ ವಿಶೇಷವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಬಣ್ಣದಲ್ಲಿ ಮಿಂದೇಳುತ್ತಾರೆ.

ಪಟ್ಟಣದಲ್ಲಿ ಎಲ್ಲ ವಯೋಮಾನದವರು ಹಲಿಗೆ ಬಾರಿಸುತ್ತಾ, ಬಣ್ಣ ಎರಚುತ್ತಾ ಒಬ್ಬರಿಗೊಬ್ಬರು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಸಂಭ್ರಮಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!