ಕರೋನಾ ಭಯವೇ..? ನೈಸರ್ಗಿಕ ಬಣ್ಣದಾಟಕ್ಕೆ ಇಲ್ಲಿದೆ ಟಿಪ್ಸ್

409

ಇಂದು ಹೋಳಿ ಹುಣ್ಣಿಮೆ. ನಾಳೆ ಎಲ್ಲೆಡೆ ರಂಗೀನ ಹಬ್ಬ. ದೇಶದ ಮೂಲೆ ಮೂಲೆಯಲ್ಲಿ ನಾಳೆ ಹೋಳಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಿದ್ದಾರೆ. ಇದರ ನಡುವೆ ಕರೋನಾ ವೈರಸ್ ಕುರಿತು ಈಗಾಗ್ಲೇ ಜಾಗೃತಿ ನಡೆದಿದೆ. ಆದ್ರೂ ಇದರ ಎಫೆಕ್ಟ್ ಹೋಳಿ ಹಬ್ಬದ ಮೇಲೆ ಆಗಿದ್ದು, ಕೆಮಿಕಲ್ ಬಣ್ಣದಿಂದ ದೂರ ಇರಬೇಕು ಅಂತಾ ಹೇಳಲಾಗ್ತಿದೆ. ಅಲ್ದೇ, ಬಹುತೇಕ ಬಣ್ಣ ಚೀನಾದಿಂದ ಬರ್ತಿದ್ದು, ಈ ಬಾರಿಯ ಹೋಳಿ ಆಚರಣೆ ಬಗ್ಗೆ ಎಚ್ಚರಿಕೆ ಇರ್ಲಿ ಎಂದು ಮೆಸೇಜ್ ಗಳು ಎಲ್ಲೆಡೆ ಹರಿದಾಡ್ತಿವೆ.

ಬಣ್ಣ ಆಡುವುದು ಅಂದ್ರೆ ಎಲ್ಲರಿಗೂ ಇಷ್ಟ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರು ಇದರಲ್ಲಿ ಮುಳುಗಿ ಏಳ್ತಾರೆ. ಹಾಗಾದ್ರೆ ರಾಸಾಯನಿಕ ಬಣ್ಣದಿಂದ ದೂರವಿದ್ದು ನೈಸರ್ಗಿಕ ಬಣ್ಣ ತಯಾರಿಸುವುದು ಹೇಗೆ? ಅದ್ರಿಂದ ಆಡೋದು ಹೇಗೆ ಅನ್ನೋ ಟಿಪ್ಸ್ ಇಲ್ಲಿದೆ.

ಬಣ್ಣ ತಯಾರಿಸುವುದು ಹೇಗೆ?

ಆರೆಂಜ್ ಬಣ್ಣ ಬೇಕು ಎನ್ನುವವರು ಚೆಂಡು ಹೂವನ್ನ ಮೊದಲು ಚೆನ್ನಾಗಿ ಒಣಗಿಸಿ. ನಂತರ ಬಿಸಿ ನೀರಿನಲ್ಲಿ ಹಾಕಿ ರಾತ್ರಿ ಪೂರ್ತಿ ನೆನೆಸಿಡಿ. ಬೆಳಗ್ಗೆ ಇದರ ಬಣ್ಣವನ್ನ ಪಿಚಕಾರಿ ಹಾಗೂ ಬಲೂನ್ ಗಳಿಗೆ ಹಾಕಿ ಬಳಸಬಹುದು.

ಹಳದಿ ಕಲರ್ ಮಾಡಲು, ಒಂದು ಸ್ಪೋನ್ ಅರಿಶಿಣ ಹಾಗೂ ಒಂದು ಸ್ಪೋನ್ ಮೈದಾ ಹಾಕಿ ಕಲಿಸಿ. ನಂತರ ಚೆನ್ನಾಗಿ ನೀರು ಹಾಕಿ ಕಲಿಸಿ ಆಡಬಹುದು.

ಹಸಿರು ಬಣ್ಣ ತಯಾರಿಸಲು ಪಾಲಕ್ ಸೊಪ್ಪು ಬೆಸ್ಟ್. ಪಾಲಕ್ ಸೊಪ್ಪನ್ನ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ನಂತ್ರ ತಣ್ಣೀರಿನೊಂದಿಗೆ ಮಿಕ್ಸ್ ಮಾಡಿ ಸೋಸಿಕೊಂಡು ಬಣ್ಣದ ಆಟವಾಡಬಹುದು.

ಇನ್ನು ಕೇಕ್ ಹಾಗೂ ಸ್ಪೀಟ್ ತಯಾರಿಸಲು ಬಳಸುವ ಫುಡ್ ಕಲರ್ಸ್ ತೆಗೆದುಕೊಳ್ಳಬಹುದು. ನಿಮಗೆ ಬೇಕಾದ ಫುಡ್ ಕಲರ್, ಕಾರ್ನ್ ಫ್ಲೋರ್(ಮೆಕ್ಕೆಜೋಳದ ಹಿಟ್ಟು) ಹಾಗೂ ನೀರು ಹಾಕಿ ಗಟ್ಟಿಯಾಗಿ ನೆನೆಸಿ. ನಂತ್ರ ಇದನ್ನ ಒಂದು ಪ್ಲೇಟ್ ನಲ್ಲಿ ಹಾಕಿ ಒಣಗಿಸಿ. ಒಣಗಿದ ನಂತ್ರ ಸಿಗುವ ಪುಡಿಯನ್ನ ಚೆನ್ನಾಗಿ ಕುಟ್ಟಿ. ಆಗ ನಿಮ್ಗೆ ವಿಭಿನ್ನ ಕಲರ್ ಗಳು ಸಿಗುತ್ತವೆ.

ಹೀಗೆ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನ ತೆಗೆದುಕೊಂಡು ಬಣ್ಣ ತಯಾರಿಸಿಕೊಳ್ಳಬಹುದು. ರಾಸಾಯನಿಕ ಬಣ್ಣದಿಂದ ದೂರ ಉಳಿಯಬೇಕು ಎನ್ನುವರು, ಕರೋನಾ ಭೀತಿಯಿಂದ ಈ ಬಾರಿ ಬಣ್ಣ ಆಡೋದು ಬೇಡ ಎನ್ನುವರು ಇವುಗಳನ್ನ ಟ್ರೈ ಮಾಡಬಹುದು.




Leave a Reply

Your email address will not be published. Required fields are marked *

error: Content is protected !!