ಎಲ್ಲೆಡೆ ರಂಗೀನ್ ಆಟ

458

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯಾದ್ಯಂತ ಇಂದು ಹೋಳಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ಚಿಣ್ಣರು ಸೇರಿದಂತೆ ದೊಡ್ಡವರು ಬಣ್ಣವನ್ನು ಎರೆಚುತ್ತಾ ಸಂಭ್ರಮಿಸುತ್ತಿದ್ದಾರೆ. ನಿನ್ನೆ ಹೋಳಿ ಹುಣ್ಣಿಮೆ ಮಾಡಲಾಗಿದೆ. ರಾತ್ರಿ ಕಾಮದಹನ ನಡೆಸಲಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ಹಾಸನ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ, ಬಳ್ಳಾರಿ ಸೇರಿದಂತೆ ಎಲ್ಲೆಡೆ ರಂಗೀನ್ ಹಬ್ಬದ ಕಳೆ ಜೋರಾಗಿದೆ.




Leave a Reply

Your email address will not be published. Required fields are marked *

error: Content is protected !!