ಅಧಿಕಾರದ ದರ್ಪ: ಈಕೆಯ ಗೋಳು ನೋಡಿದ್ರೆ ಕಣ್ಣೀರು ಬರುತ್ತೆ

355

ತುಮಕೂರು: ಗುಬ್ಬಿ ತಾಲೂಕಿನ ತಿಪ್ಪೂರ ಗ್ರಾಮದಲ್ಲಿ ಕೋಡಿಕೆಂಪಮ್ಮ ದೇವಾಲಯದ ಜಾತ್ರೆ ನಡೆಯುವ ಜಾಗದ ಭೂಮಿ ವಿವಾದದಲ್ಲಿದೆ. ಹೀಗಾಗಿ ಈ ಜಾಗವನ್ನ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದ್ರೆ, ಗ್ರಾಮ ಲೆಕ್ಕಿಗ ಹಾಗೂ ಕಂದಾಯಾಧಿಕಾರಿಯ ತಪ್ಪಿನಿಂದ ಅಮಾಯಕ ಮಹಿಳೆಯ ತೋಟವೊಂದು ನಾಶವಾಗಿದೆ.

ಸಿದ್ದಮ್ಮ ಎಂಬುವರ ತೋಟದಲ್ಲಿ ಬೆಳೆದಿದ್ದ ತೆಂಗು ಹಾಗೂ ಅಡಿಕೆ ಮೆರಗಳನ್ನ ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ. ತಹಶೀಲ್ದಾರ್ ಕೂಡ ಅದನ್ನ ಪರಿಶೀಲಿಸುವ ಗೋಜಿಗೆ ಹೋಗದೆ ತೋಟವನ್ನು ಹಾಳು ಮಾಡಲಾಗಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಜಾತ್ರೆ ನಡೆಯಬೇಕಿದ್ದ ಬೇರೆ ಸ್ಥಳದಲ್ಲಿ ಪರಿಶೀಲನೆ ಮಾಡುವ ಬದಲು ಸಿದ್ದಮ್ಮನವರ ತೋಟ ನಾಶ ಮಾಡಿದ್ದಾರೆ. ಇದನ್ನ ನೋಡಿದ ಮಹಿಳೆಯ ಆಕ್ರಂದನ ಮುಗಿಲು ಮುಟ್ಟಿದ್ದು, ಅಧಿಕಾರಿಗಳ ದರ್ಪಕ್ಕೆ ಜನರು ಹಿಡಿಶಾಪ ಹಾಕ್ತಿದ್ದಾರೆ.

ಇಂದು ಬೆಳಗ್ಗೆ ಸಿದ್ದಮ್ಮನವರ ತೋಟಕ್ಕೆ ಹೋದ ಗುಬ್ಬಿ ತಹಶೀಲ್ದಾರ್ 170 ಅಡಿಕೆ ಗಿಡಗಳು ಮತ್ತು 25 ತೆಂಗಿನ ಮರಗಳನ್ನು ಕಡಿಸಿ ಹಾಕಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಾರೆ. ತಹಶೀಲ್ದಾರ್ ಕುರುಡು ಆಟಕ್ಕೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ. ಹಿಂದು ಮುಂದು ನೋಡದೆ ಬದುಕಿಗೆ ಆಧಾರವಾಗಿದ್ದ ಮರಗಳನ್ನ ಕಡಿಸಿ ಹಾಕಿರೋದು ಸಿದ್ದಮ್ಮ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ತಹಶೀಲ್ದಾರ್, ಕಂದಾಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗನ ಮೇಲೆ ಏನು ಕ್ರಮ ತೆಗೆದುಕೊಳ್ತೀರಿ ಎಂದು ಸಾರ್ವಜನಿಕರು, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳನ್ನ ಪ್ರಶ್ನೆ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!