ಡಿಕಾಕ್, ಡುಸ್ಸೆನ್ ಭರ್ಜರಿ ಶತಕ.. ಕಿವೀಸ್ ಗೆ 358 ರನ್ ಟಾರ್ಗೆಟ್

138

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಪುಣೆ: ಇಲ್ಲಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ 32 ಪಂದ್ಯದಲ್ಲಿ ಸೌಥ್ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದಾರೆ. ಮೊದಲು ಬ್ಯಾಟ್ ಮಾಡಿರುವ ಸೌಥ್ ಆಫ್ರಿಕಾ ಅಬ್ಬರದ ಬ್ಯಾಟಿಂಗ್ ಮಾಡಿದೆ. ಭರ್ಜರಿ ಫಾರ್ಮ್ ನಲ್ಲಿರುವ ಡಿಕಾಕ್ ಮತ್ತೊಂದು ಶತಕ ಸಿಡಿಸಿದ್ದಾರೆ.

ಡಿಕಾಕ್ 114, ಡುಸ್ಸೆನ್ 133, ಡೇವಿಡ್ ಮಿಲ್ಲರ್ 53 ರನ್ ಗಳ ಭರ್ಜರಿ ಆಟದಿಂದಾಗಿ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 357 ದೊಡ್ಡ ಸ್ಕೂರ್ ಮಾಡಿದೆ. ಕೀವಿಸ್ ಪರ ಟೀಮ್ ಸೌಥಿ 2, ಟ್ರೆಂಟ್ ಬೋಲ್ಟ್ ಜೇಮ್ಸ್ ನೀಸಾಮ್ ತಲಾ ವಿಕೆಟ್ ಪಡೆದರು.

ಇನ್ನು ವಿಶ್ವಕಪ್ ನಲ್ಲಿ ಕ್ವಿಂಟಾನ್ ಡಿ ಕಾಕ್ 4ನೇ ಶತಕ ಡಿಸಿದರು. ಡುಸ್ಸೆನ್ 2ನೇ ಶತಕ ಬಾರಿಸಿದರು. ಬಿಗ್ ಸ್ಕೋರ್ ಬೆನ್ನು ಹತ್ತಿರುವ ನ್ಯೂಜಿಲೆಂಡ್ 61 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!