ಸರಣಿ ಸೋತ ಕೊಹ್ಲಿ ಬಾಯ್ಸ್

274

ಪ್ರಜಾಸ್ತ್ರ ಕ್ರೀಡಾಸುದ್ದಿ

ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸುವ ಮೂಲಕ ಸರಣಿ ಕೈತಪ್ಪಿಸಿಕೊಂಡಿದೆ. ಪಿಂಚ್ ಪಡೆ ನೀಡಿದ್ದ 390 ಬಿಗ್ ಸ್ಕೋರ್ ಚೇಸ್ ಮಾಡಲು ಆಗದೆ  338 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು 51 ರನ್ ಗಳ ಅಂತರದಿಂದ ಸೋತಿದೆ. ಇದರೊಂದಿಗೆ 2-0 ಅಂತರಿಂದ ಸರಣಿ ಕೈವಶವಾಗಿದೆ. ಕೊನೆಯ ಪಂದ್ಯ ಡಿಸೆಂಬರ್ 2ರಂದು ನಡೆಯಲಿದೆ.

ಮಯಾಂಕ್ ಅಗರ್ವಾಲ್ 28, ಧವನ್ 30, ಕೊಹ್ಲಿ 89, ಶ್ರೇಯಸ್ 38, ಕೆ.ಎಲ್ ರಾಹುಲ 76, ಹಾರ್ದಿಕ ಪಾಂಡೆ 28, ಜಡೇಜಾ 24, ನವದೀಪ ಸೈನಿ 10, ಶೆಮಿ 1, ಬೂಮ್ರಾ 0, ಚಾಹಲ್ 4 ರನ್ ಬಾರಿಸಿದ. ಹೀಗಾಗಿ 338 ರನ್ ಗಳಿಗೆ 9 ಕಳೆದುಕೊಂಡು ಶರಣಾಯ್ತು.

ಆಸ್ಟ್ರೇಲಿಯಾ ಪರ ಕಮಿನ್ಸ್ 3, ಹಝಲ್ ವುಡ್ 2, ಹೆನ್ರಿಕ್ಸ್, ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದ್ರು. ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸೀಸ್ ಪಡೆ ಭರ್ಜರಿ ಬ್ಯಾಟಿಂಗ್ ಮಾಡಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಸ್ಮಿತ್ ಈ ಮ್ಯಾಚ್ ನಲ್ಲಿ ಭರ್ಜರಿ 104 ರನ್ ಗಳಿಸಿದ್ರು. ವಾರ್ನರ್ 83, ಪಿಂಚ್ 60, ಮೊರನ್ಸ್ 70, ಮ್ಯಾಕ್ಸ್ ವೆಲ್ 63 ರನ್ ಬಾರಿಸಿದ್ರು.

ಹೀಗೆ ಪ್ರತಿಯೊಬ್ಬರು ಇಂಡಿಯನ್ ಬೌಲರ್ ಗಳನ್ನ ಬೆಂಡೆತ್ತಿದ ಪರಿಣಾಮ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿ 390 ಟಾರ್ಗೆಟ್ ನೀಡಿದೆ. ಇಂಡಿಯಾ ಪರ ಶೆಮಿ, ಬೂಮ್ರಾ, ಹಾರ್ದಿಕ ಪಾಂಡೆ ತಲಾ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!