ಸರಣಿ ಗೆದ್ದ ಟೀಂ ಇಂಡಿಯಾ

224

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಜಿಂಬಾಬ್ವೆ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ 3 ಪಂದ್ಯಗಳ ಸರಣಿಯನ್ನು 1 ಪಂದ್ಯಕ್ಕೂ ಮೊದಲೇ ವಶಪಡಿಸಿಕೊಂಡಿದೆ.

ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ 161 ರನ್ ಗಳಿಗೆ ಜಿಂಬಾಬ್ವೆ ತಂಡವನ್ನು ಕಟ್ಟಿ ಹಾಕಿತು. ಸೀನ್ ವಿಲಿಯಮ್ಸ್ 42, ರ್ಯಾನ್ ಬುರಿ 39 ರನ್ ಗರಿಷ್ಟ ಸ್ಕೋರ್ ಆಗಿದೆ. 3 ವಿಕೆಟ್ ಪಡೆದ ಶ್ರಾದೂಲ್ ಠಾಕೂರ್ ಮಿಂಚಿದರು. ಸಿರಾಜ್, ಕೃಷ್ಣ್, ಪಟೇಲ್, ಯಾದವ್, ಹೂಡಾ ತಲಾ ಒಂದೊಂದು ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಭಾರತ ಸಂಜು ಸ್ಯಾಮ್ಸನ್ 43 ರನ್ ಗಳ ಭರ್ಜರಿ ಆಟದಿಂದಾಗಿ 25.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿ ಗೆಲುವು ಸಾಧಿಸಿತು. ಸಂಜು ಸ್ಯಾಮ್ಸನ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಧವನ್ 33, ಗಿಲ್ 33 ರನ್ ಗಳಿಸಿದರು. ಜಿಂಬಾಬ್ವೆ ಪರ ಜಾಂಗ್ವೆ 2, ಚಿವಾಂಗ್ 1, ನ್ಯಾಯೂಚ್ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!