ದೇವರ ಹಿಪ್ಪರಗಿಯಲ್ಲಿ ಅಂತರ್ ಜಿಲ್ಲಾ ಕಳ್ಳರ ಬಂಧನ

209

ಪ್ರಜಾಸ್ತ್ರ ಅಪರಾಧ ಸುದ್ದಿ

ದೇವರ ಹಿಪ್ಪರಗಿ: ನೀರಿನ ಮೋಟರ್ ಗಳನ್ನು ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರನ್ನು ದೇವರ ಹಿಪ್ಪರಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 9 ಲಕ್ಷದ 10 ಸಾವಿರ ಮೌಲ್ಯದ 2ಎಚ್ ಪಿ ಮೋಟರ್ ಗಳು ಹಾಗೂ ಒಂದು ಕ್ರೂಸರ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ರಸೂಲ್ ಗೌಸುಸಾಬ ಸವಡಿ, ಸುನೀಲ ಬಸನಗೌಡ ಮೆಣಸಗಿ, ವಿಜಯ ಶರಣಪ್ಪಗೌಡ ಪಂಚಂಪಾಟೀಲ ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರು ಮೆಕ್ಯಾನಿಕಲ್ ಕೆಲಸ ಮಾಡುತ್ತಿದ್ದ, ಓರ್ವ ಚಾಲಕನಿದ್ದಾನೆ. ಇವರೆಲ್ಲ ಸೇರಿ ಕಳ್ಳತನಕ್ಕೆ ಇಳಿದಿದ್ದರು. ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಸೋಮನಕಟ್ಟಿ ಗ್ರಾಮದವರಾಗಿದ್ದಾರೆ.

ಪಿಎಸ್ಐ ಆರ್.ವೈ ಬೀಳಗಿ, ಸಿಬ್ಬಂದಿ ಸಂಜು ತಳವಾರ, ಆರ್.ಎಲ್ ಬಿರಾದಾರ, ರಜಾಕ್ ಚಟ್ನಳ್ಳಿ, ಬಸವರಾಜ ನಾವಿ, ವಿಶ್ವನಾಥ ಶಾಂತಿಗಿರಿ, ಬಾಳು ಮೇಡೆದಾರ್, ಮುಲ್ಕಸಾಬ ಮುಜಾವರ ಈ ಒಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!