ಸೇಂಟ್ ಜೋಸೆಫ್ ಕಾಲೇಜಿಗೆ ಇನ್ವಿನ್ಸಿಯಾ-22 ಪ್ರಶಸ್ತಿ

418

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇನ್ವಿನ್ಸಿಯಾ- 2022, ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಮಹೋತ್ಸವವನ್ನು ಮೇ 27-28ರಂದು ಆಯೋಜಿಸಲಾಗಿತ್ತು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಚಾಂಪಿಯನ್ಸ್ ಹಾಗೂ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜು ರನ್ನರ್ ಅಪ್ ಆಯಿತು.

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ (PRK ಪ್ರೊಡಕ್ಷನ್ಸ್ & PRK ಆಡಿಯೋ) ಇನ್ವಿನ್ಸಿಯಾ-22 ಅನ್ನು ಉದ್ಘಾಟಿಸಿದರು. ಲೆಜೆಂಡರಿ ನಟ ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ಅವರ ನೆನಪುಗಳನ್ನು ಸ್ಮರಿಸಿಕೊಂಡು ಅವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇನ್ವಿನ್ಸಿಯಾ 50 ತಂಡ  ಮತ್ತು ವೈಯಕ್ತಿಕ ಈವೆಂಟ್‌ಗಳಲ್ಲಿ 90 ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಂದ 2,100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭಾಗವಹಿಸುವುದರ ಜೊತೆಗೆ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಭ್ರಮಿಸಿದರು. ಡಿವೈನ್ x ಗಲ್ಲಿ ಗ್ಯಾಂಗ್ ಮೊದಲನೇ ದಿನದಂದು ಅದ್ಭುತ ಪ್ರದರ್ಶನದೊಂದಿಗೆ ಹೆಸರು ಮಾಡಿತು.  ವಿವಿಧ ಕಲಾವಿದರಾದ Khanzaadi, Loud_silence, Jubilman ಮತ್ತು ಇತರರು ಹಿಪ್ ಹಾಪ್ ಮೂಡ್ʼನ  ಸಡಗರವನ್ನು ಡಿವೈನ್  (ಗಲ್ಲಿ ಗ್ಯಾಂಗ್) ಉಂಟು ಮಾಡಿದರು .

2ನೇ ದಿನದ  ಕಾರ್ಯಕ್ರಮವನ್ನು  ಜಾವೇದ್ ಅಲಿ ಅವರು ಉದ್ಘಾಟಿಸಿದರು. ನೃತ್ಯ, ನಾಟಕ, ಸಂಗೀತ ಮತ್ತು ಲಲಿತಕಲೆಗಳ ಪ್ರಕಾರಗಳಲ್ಲಿ ಬೃಹತ್ ವೈವಿಧ್ಯಮಯ ಸ್ಪರ್ಧೆಗಳ ಆರಂಭಕ್ಕೆ ನಾಂದಿ ಹಾಡಿತು. EMC Truth ಮತ್ತು ಅರ್ಜುನ್ (DJ ಕ್ವೇಕ್) ಸಮ್ಮೋಹನಗೊಳಿಸುವ, ಪ್ರತಿಭಾವಂತ ಗಾಯಕಿ ಅನನ್ಯ ಬಿರ್ಲಾ ಗಾಯನ, ಡಿಜೆ ಅಬ್ಬರ ಜೋರಾಗಿತ್ತು.

ಮೇಡಂ ಚಾನ್ಸೆಲರ್ ಕೌಸರ್ ಅಹಮದ್ ಅವರು ಇನ್ವಿನ್ಸಿಯಾ-22 ರ ಸಮಗ್ರ ಚಾಂಪಿಯನ್‌ಶಿಪ್ ಅನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿಗೆ ಪ್ರದಾನ ಮಾಡಿದರು. ರನ್ನರ್ ಟ್ರೋಫಿಯನ್ನು ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿಗೆ ನೀಡಿದರು. ಇನ್ವಿನ್ಸಿಯಾದ ಎರಡು ದಿನಗಳ ಉತ್ಸವವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ನಿಸ್ಸಾರ್ ಅಹಮದ್ ಮತ್ತು ಉಪಾಧ್ಯಕ್ಷರಾದ ಸಲ್ಮಾನ್ ಅಹಮದ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಗಳ ವಿಭಾಗದ ಸಂಚಾಲಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಯಶಸ್ವಿಗೊಳಿಸಿದರು.




Leave a Reply

Your email address will not be published. Required fields are marked *

error: Content is protected !!