ಅನುವಾದಗಳ ವಿಚಾರ ಸಂಕಿರಣ ಅವಶ್ಯಕ: ಡಾ.ಅಬ್ದುಲ್ ಷರೀಪ್

352

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಬಹುಭಾಷಾ ವಿಭಾಗ, ಕನ್ನಡ ಮತ್ತು ದ್ರಾವಿಡ ಭಾಷಾ ಅನುವಾದಕರ ಸಂಘದ  ಸಹಯೋಗದಲ್ಲಿ ‘ಡ್ರಾವಿಡ ಭಾಷೆಯ ಸಾಹಿತ್ಯದ ಅನುವಾದ ಒಂದು ಅವಲೋಕನ’ ಅನ್ನೋ ವಿಚಾರ ಸಂಕಿರಣ ಇತ್ತೀಚೆಗೆ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ನಿಕಾಯದ ಡೀನ್ ಡಾ.ಅಬ್ದುಲ್ ಷರೀಪ್, ಭಾರತ ವೈವಿಧ್ಯಮಯ ರಾಷ್ಟ್ರವಾಗಿದ್ದು ಬೇರೆ ಬೇರೆ ರಾಜ್ಯಗಳ ಸಂಸ್ಕೃತಿ, ಸಾಹಿತ್ಯವನ್ನು ತಿಳಿದುಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಡ್ರಾವಿಡ ಭಾಷೆಯ ಸಾಹಿತ್ಯದ ಅಧ್ಯಯನ‌ದ ಅನುವಾದ ಅವಶ್ಯವಾಗಿದೆ. ಅನುವಾದ ಕುರಿತ ಇಂತಹ ವಿಚಾರ ಸಂಕಿರಣಗಳು ನಡೆಯಬೇಕಿದೆ ಎಂದು ಹೇಳಿದರು.

ಡ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಸುಷ್ಮಾ ಶಂಕರ್ ಮಾತನಾಡಿ, ಡ್ರಾವಿಡ ಭಾಷೆಯಲ್ಲಿ ಅನೇಕ ಕೃತಿಗಳನ್ನು ಅನುವಾದಿಸುವ ಅಗತ್ಯವಿದೆ. ಡ್ರಾವಿಡ ಸಾಹಿತ್ಯದಲ್ಲಿ ಅನೇಕ ಮೇರು ಕವಿಗಳು ಭಾರತೀಯ ಸಾಹಿತ್ಯಕ್ಕೆ ತಮ್ಮದೇ ಆದ ಸ್ವಂತಿಕೆಯುಳ್ಳ ಕೊಡುಗೆ ನೀಡಿದ್ದಾರೆ. ಎಂದರು.

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ  ವಿಭಾಗದ ಪ್ರಾಧ್ಯಾಪಕಿ ಡಾ.ಮಲರ್ ವಿಳಿ ಕೆ ಮಾತನಾಡಿ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿಗಳ ಸಹಕಾರದಿಂದ ಇಂತಹ ಮಹತ್ವದ ವಿಚಾರ ಸಂಕಿರಣ ಮತ್ತು ಕವಿ ಗೋಷ್ಠಿ ಆಯೋಜಿಸಲಾಗಿದೆ. ಡ್ರಾವಿಡ ಸಾಹಿತ್ಯದ ಮಹತ್ವ ತಿಳಿಸಲು ಅನುವಾದಿತ ಕೃತಿಗಳನ್ನು ಕನ್ನಡಕ್ಕೆ ತರುವ ಅವಶ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಡ್ರಾವಿಡ ಭಾಷಾ ಅನುವಾದಕರ ಅಸೋಸಿಯೇಷನ್ ಸಲಹೆಗಾರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ನಾ.ದಾಮೋದರ ಶೆಟ್ಟಿ, ಡಾ.ಜಗದೀಶ್ ಗೋಡಿಹಾಳ್, ಕೊಚ್ಚಿನ್ ವಿಶ್ವವಿದ್ಯಾಲಯದ ಡಾ.ಶ್ರೀಧರನ್ ಮತ್ರು, ಡಾ.ಶಿವಕುಮಾರ್,  ಕೆ.ಕೆ.ಗಂಗಾಧರನ್, ಡಾ. ರಂಗ  ಸ್ವಾಮಿ, ಮೋಹನ್ ಕುಂಟಾರ್  ಮತ್ತಿತರರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!