ಇಂಡಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್: 3 ಲಕ್ಷ ಸಮೇತ ಮೂವರ ಬಂಧನ

552

ಪ್ರಜಾಸ್ತ್ರ ಅಪರಾಧ ಸುದ್ದಿ

ಇಂಡಿ: ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸ್ತಿದ್ದ ಮೂವರನ್ನ ಬಂಧಿಸಲಾಗಿದೆ. ಐಪಿಎಲ್ ಪಂದ್ಯಗಳ ಬೆಟ್ಟಿಂಗ್ ನಡೆಸ್ತಿದ್ದ ಮೂವರನ್ನ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 3 ಲಕ್ಷ ರೂಪಾಯಿ, 10 ಮೊಬೈಲ್ ಹಾಗೂ 1 ಎಲ್ ಸಿಡಿ ಟಿವಿಯನ್ನ ವಶ ಪಡಿಸಿಕೊಳ್ಳಲಾಗಿದೆ. ಡಿಸಿಐಬಿ ಪೊಲೀಸ್ ಸಿ.ಬಿ ಬಾಗೇವಾಡಿ ನೇತೃತ್ವದ ಪೊಲೀಸ್ ಟೀಂ ದಾಳಿ ಮಾಡಿ, ಪಂಚಶೀಲ ನಗರದ ಶಿವಪುತ್ರ ಬಗಲಿ, ಚಂದ್ರಕಾಂತ ಪಾಟೀಲ ಹಾಗೂ ಸಾಯಬಣ್ಣ ಮೂರಮನ ಎಂಬುವರನ್ನ ಅರೆಸ್ಟ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!