ಐಪಿಎಲ್ ನಲ್ಲಿ ಇದುವರೆಗೂ ಮಹಿ ಗಳಿಸಿದ್ದು ಎಷ್ಟು ಕೋಟಿ?

254

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಬಂದ ಮೇಲೆ ಕ್ರಿಕೆಟ್ ಜಗತ್ತಿನಲ್ಲಿ ಬಹುದೊಡ್ಡ ಬದಲಾವಣೆ ಆಯ್ತು. ಟೆಸ್ಟ್, ಏಕದಿನ ಪಂದ್ಯಗಳ ಮಜಾ ಹೋಯ್ತು. ಏನಿದ್ದರೂ ಟಿ-20 ಹೊಡಿ ಬಡಿ ಅಬ್ಬರ. ಇದರ ಜೊತೆಗೆ ದೇಶಿ, ವಿದೇಶಿ ಆಟಗಾರರು ಒಂದೇ ತಂಡದಲ್ಲಿ ಆಡುವ ಪದ್ಧತಿ ಶುರುವಾಗಿ ಕೋಟಿ ಕೋಟಿ ಹಣ ಗಳಿಕೆ ಮಾಡಿಕೊಂಡರು. ಅದರಲ್ಲಿ ಇಂಡಿಯನ್ ಟೀಂ ಮಾಜಿ ಕ್ಯಾಪ್ಟನ್ ಮಹೇಂದ್ರ್ ಸಿಂಗ್ ಧೋನಿ ಸಹ ಒಬ್ಬರು.

2008ರಲ್ಲಿ ಶುರುವಾದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿಗೆ ಬರೋಬ್ಬರಿ 6 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಅಲ್ಲಿಂದ ಇಲ್ಲಿಯ ತನಕ ಧೋನಿ ಟಾಪ್ ನಲ್ಲಿದ್ದಾರೆ. ಮುಂದೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಾ ಬಂದಿತು.

2011ರಲ್ಲಿ 8 ಕೋಟಿ 28 ಲಕ್ಷ ಪಡೆದರು. 2014ರ ಬಳಿಕ 12 ಕೋಟಿ 50 ಲಕ್ಷ ರೂಪಾಯಿ ಆಯಿತು. ಎರಡು ಪುಣೆ ಪರ ಆಡಿದ ನಂತರ 2018ರಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದ ಧೋನಿ 15 ಕೋಟಿ ಪಡೆಯಲು ಶುರು ಮಾಡಿದರು. ಈಗ್ಲೂ ಒಂದು ಟೂರ್ನಿಗೆ 15 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಹೀಗಾಗಿ 14 ವರ್ಷಗಳಲ್ಲಿ 152 ಕೋಟಿ 84 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದು ಬರೀ ಪ್ರಾಂಚೈಸಿಗಳಿಂದ ಪಡೆದ ಸಂಭಾವನೆ. ಇನ್ನು ಜಾಹೀರಾತು ಸೇರಿದರೆ ಸಾವಿರಾರು ಕೋಟಿ ರೂಪಾಯಿ ಆಗುತ್ತೆ.




Leave a Reply

Your email address will not be published. Required fields are marked *

error: Content is protected !!