ವಿಚಿತ್ರ ಶೈಲಿಯ ಮಲಿಂಗ ಕ್ರಿಕೆಟ್ ಅಂಗಳಕ್ಕೆ ವಿದಾಯ

294

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ಲಸಿತ್ ಮಲಿಂಗ ಎಲ್ಲ ಮಾದರಿಯ ಕ್ರಿಕೆಟ್ ಆಟಕ್ಕೆ ಮಂಗಳವಾರ ವಿದಾಯ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ. 38 ವರ್ಷದ ಆಟಗಾರ ತಮ್ಮ ವೃತ್ತಿ ಬದುಕಿಗೆ ನಿವೃತ್ತಿಗೆ ಘೋಷಿಸಿದ್ದಾರೆ.

226 ಏಕದಿನ ಪಂದ್ಯಗಳಿಂದ 338 ವಿಕೆಟ್, 30 ಟೆಸ್ಟ್ ಪಂದ್ಯಗಳಿಂದ 101 ವಿಕೆಟ್ ಹಾಗೂ 84 ಟಿ-20 ಪಂದ್ಯಗಳಿಂದ 107 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್ 122 ಪಂದ್ಯಗಳನ್ನು ಆಡಿದ್ದು 170 ವಿಕೆಟ್ ಕಬಳಿಸಿದ್ದಾರೆ. 2004ರಲ್ಲಿ ಏಕದಿನ ಹಾಗೂ ಟೆಸ್ಟ್ ಅಂಗಳಕ್ಕೆ ಎಂಟ್ರಿ ಪಡೆದರು. 2006ರಲ್ಲಿ ಟಿ-20 ಪಂದ್ಯ ಶುರು ಮಾಡಿದರು.




Leave a Reply

Your email address will not be published. Required fields are marked *

error: Content is protected !!