ಕಾರವಾರ ಯುವಕನ ನಿಫಾ ವರದಿ ನಿಗೆಟಿವ್

184

ಪ್ರಜಾಸ್ತ್ರ ಸುದ್ದಿ

ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರ ಮೂಲದ ಯುವಕನ ನಿಫಾ ವರದಿ ನೆಗೆಟಿವ್ ಬಂದಿದೆ. ಈ ಮೂಲಕ ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದ ವಿಚಾರ ನೆಮ್ಮದಿ ತಂದಿದೆ.

ಗೋವಾದ ಆರ್ ಪಿಸಿಆರ್ ಕಿಟ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸೆಪ್ಟೆಂಬರ್ 8ರಂದು ಊರಿಗೆ ಬಂದಿದ್ದ. ಹೀಗೆ ಬಂದ ಯುವಕನಿಗೆ ತಲೆನೋವು, ಜ್ವರ ಸೇರಿದಂತೆ ನಿಫಾ ವೈರಸ್ ಲಕ್ಷಣಗಳು ಕಂಡು ಬಂದಿದ್ವು. ಹೀಗಾಗಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಯುವಕನ ರಕ್ತ, ಮೂತ್ರ, ಮೂಗಿನ ದ್ರವ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು ನಿಫಾ ವೈರಸ್ ಇಲ್ಲವೆಂದು ತಿಳಿದು ಬಂದಿದ್ದು, ಯುವಕ ಆರೋಗ್ಯವಾಗಿದ್ದಾನಂತೆ.




Leave a Reply

Your email address will not be published. Required fields are marked *

error: Content is protected !!