ನಾಳೆಯಿಂದ ಚುಟುಕು ಕ್ರಿಕೆಟ್ ಹಬ್ಬ

402

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಐಪಿಎಲ್ ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದ ಟೂರ್ನಿ ನಾಳೆಯಿಂದ ಶುರುವಾಗುತ್ತಿದೆ. ಇದೆ ಮೊದಲ ಬಾರಿಗೆ 10 ತಂಡಗಳು ಕಣಕ್ಕೆ ಇಳಿಯುತ್ತಿವೆ. ಮೊದಲಿಗೆ 2021ರ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್ ಅಪ್ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ.

ಒಟ್ಟು 70 ಪಂದ್ಯಗಳು ನಡೆಯಲಿವೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಶುರುವಾಗಲಿವೆ. ಈ ಬಾರಿ ಲಖ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ. ಮಾರ್ಚ್ 26ರಿಂದ ಮೇ 22ರ ತನಕ ಟೂರ್ನಿ ನಡೆಯಲಿದೆ.

ಸಿಎಸ್ಕೆ ನಾಯಕನಾಗಿ ಜಡೇಜಾ, ಆರ್ ಸಿಬಿ ನಾಯಕನಾಗಿ ಪ್ಲಾಪ್ ಡುಪ್ಲಸಿ, ಮುಂಬೈಗೆ ರೋಹಿತ್ ಶರ್ಮಾ, ಸನ್ ರೈಸರ್ಸ್ ಹೈದ್ರಾಬಾದ್ ಗೆ ಕೇನ್ ವಿಲಿಯಮ್ಸನ್ ಮುಂದುವರೆದಿದ್ದಾರೆ. ಪಂಜಾಬ್ ಗೆ ಕೆ.ಎಲ್ ರಾಹುಲ್ ಬದಲು ಮಯಾಂಕ್ ಅಗರ್ವಾಲ್, ಹೊಸ ತಂಡ ಗುಜರಾತ್ ಟೈಟನ್ಸ್ ಗೆ ಹಾರ್ದಿಕ್ ಪಾಂಡೆ, ಲಖ್ನೋಗೆ ಕೆ.ಎಲ್ ರಾಹುಲ್, ಕೆಕೆಆರ್ ಗೆ ದಿನೇಶ್ ಕಾರ್ತಿಕ್ ಬದಲು ಶ್ರೇಯಸ್ ಅಯ್ಯರ್, ರಾಜಸ್ಥಾನ್ ಗೆ ಸಂಜು ಸ್ಯಾಮ್ಸನ್, ದೆಹಲಿಗೆ ರಿಷಬ್ ಪಂಥ್ ನಾಯಕನಾಗಿದ್ದಾರೆ.

ಈ ಹಿಂದೆ ಕೆಕೆಆರ್ ಪರ ಆಡಿದ್ದ ದಿನೇಶ್ ಕಾರ್ತಿಕ್ ಈ ಬಾರಿ ಆರ್ ಸಿಬಿಗೆ ಬಂದಿದ್ದಾರೆ. ಪಂಜಾಬ್ ಪರ ಆಡಿದ್ದ ಮಾಜಿ ನಾಯಕ ಕೆ.ಎಲ್ ರಾಹುಲ್ ಲಖ್ನೋ ಸಾರಥಿಯಾಗಿದ್ದಾರೆ. ಮುಂಬೈ ತಂಡದಲ್ಲಿ ಹಾರ್ದಿಕ್ ಪಾಂಡೆ ಗುಜರಾತ್ ಟೈಟನ್ಸ್ ನಾಯಕನಾಗಿದ್ದಾರೆ. ಒಟ್ಟು 10 ತಂಡಗಳು ಐಪಿಎಲ್ ಚಾಂಪಿಯನ್ಸ್ ಪಟ್ಟಕ್ಕಾಗಿ ಕಾದಾಡಲಿವೆ.




Leave a Reply

Your email address will not be published. Required fields are marked *

error: Content is protected !!