ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಗ್ಯಾರೆಂಟಿಗಳ ಗುಣಗಾನ

190

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಟಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಅಜಯ್ ಸಿಂಗ್ ಸೇರಿ ಇತರರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಕ್ತಿ ಯೋಜನೆ ಅಡಿ 4 ಸಾರಿಗೆ ನಿಗಮಗಳಿಂದ ನಿತ್ಯ 50-60 ಲಕ್ಷ ಮಹಿಳೆಯರು ಸೌಲಭ್ಯ ಪಡೆಯುತ್ತಿದ್ದಾರೆ. ಇದಕ್ಕಾಗಿ ವಾರ್ಷಿಕ 4 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು. 4.42 ಕೋಟಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆ ಪಡೆಯುತ್ತಿದ್ದಾರೆ. 2.14 ಕೋಟಿ ಗ್ರಾಹಕರು 200 ಯುನಿಟ್ ಉಚಿತ ವಿದ್ಯುತ್ ಲಾಭ ಪಡೆಯುತ್ತಿದ್ದಾರೆ.

1.28 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ಮಾಸಿಕ 2 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ ಎಂದರು. ಹೀಗಾಗಿ ಗ್ಯಾರೆಂಟಿ ಯೋಜನೆ ಜಾರಿಗೆ ಬಂದಿರುವುದು, ಫಲಾನುಭವಿಗಳ ವಿವರ, ಅದಕ್ಕೆ ಬಳಕೆಯಾಗುತ್ತಿರುವ ಅನುದಾನದ ಕುರಿತು ಮಾಹಿತಿ ಹಂಚಿಕೊಂಡರು.




Leave a Reply

Your email address will not be published. Required fields are marked *

error: Content is protected !!