ಒಂದೇ ಕುಟುಂಬದ ನಾಲ್ವರ ಸಾವು

235

ಪ್ರಜಾಸ್ತ್ರ ಸುದ್ದಿ

ದೊಡ್ಡಬಳ್ಳಾಪುರ: ಅನುಮಾನಸ್ಪದ ರೀತಿಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಹೊಲೆರಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೋಳಿ ಫಾರಂನಲ್ಲಿ ನಡೆದಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

ನೇಪಾಳ ಮೂಲದ ಕಾಲೇ ಸರೇರಾ, ಲಕ್ಷ್ಮಿ ಸರೇರಾ, ಉಷಾ ಸರೇರಾ ಹಾಗೂ ಫೂಲಾ ಸರೇರಾ ಅನ್ನೋ ನಾಲ್ವರು ಮೃತಪಟ್ಟಿದ್ದಾರೆ. ಅಚ್ಚರಿ ಅಂದರೆ ಇವರು ಎಲ್ಲರೂ ಕೇವಲ 8 ದಿನಗಳ ಹಿಂದೆ ಇಲ್ಲಿ ಕೆಲಸಕ್ಕೆ ಬಂದಿದ್ದರಂತೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!