ಕನ್ನಡ ಸಾಹಿತ್ಯ ವಿಸ್ತಾರವಾಗಿ ಹರಡಿದೆ: ಪ್ರೊ.ಮಲರ್ ವಿಳಿ ಕೆ

372

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಕನ್ನಡ ಸಾಹಿತ್ಯ ವಿಸ್ತಾರವಾಗಿ, ವಿಶಾಲವಾಗಿ ಎಲ್ಲೆಡೆ ಹರಡಿಕೊಂಡಿದೆ. ತಮಿಳು ಸಾಹಿತ್ಯದ ಬೇರು ಆಳವಾಗಿ ಇಳಿದಿದೆ ಎಂದು ಅನುವಾದಕರು ಹಾಗೂ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಮಲರ್ ವಿಳಿ ಕೆ ಅವರು ಹೇಳಿದರು.

ಪ್ರಜಾಸ್ತ್ರ ವೆಬ್ ಪತ್ರಿಕೆ ವತಿಯಿಂದ ಆಯೋಜಿಸಿದ್ದ ‘ಕನ್ನಡ ತಮಿಳು ಕಾವ್ಯದ ಅನುಸಂಧಾನ’ ಅನ್ನೋ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಮಾತ್ನಾಡಿದರು. ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ದ್ರಾವಿಡ್ ಹಾಗೂ ಸಂಗಂ ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಡೆದ ಅನುವಾದದ ಕುರಿತು ಅಭಿಪ್ರಾಯ ಹಂಚಿಕೊಂಡರು. ಅನುವಾದ ಮಾಡುವ ಸಂದರ್ಭದಲ್ಲಿ ಮೂಲ ಸಾಹಿತ್ಯಕ್ಕೆ ಯಾವುದೇ ರೀತಿಯಿಂದ ಅಪಚಾರವೆಸಗದೆ, ಅಲ್ಲಿನ ಸೊಗಡು ಉಳಿಸಿಕೊಂಡು ಇನ್ನೊಂದು ನೆಲದ ಭಾಷೆಗೆ ತೆಗೆದುಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಪ್ರಾದೇಶಿಕವಾಗಿ ಭಾಷೆಯ ಜೊತೆಗೆ ಪದಗಳ ಅರ್ಥ ಕೂಡಾ ವಿಭಿನ್ನವಾಗಿರುವಾಗ ಎಚ್ಚರಿಕೆಯಿಂದ ಅನುವಾದ ಮಾಡಬೇಕು ಎಂದರು.

ಇದೆ ವೇಳೆ ವೀಕ್ಷಕರ ಜೊತೆಗೆ ನಡೆದ ಸಂವಾದದಲ್ಲಿ ಕೇಳಿ ಬಂದ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಕಾರ್ಯಕ್ರಮದಲ್ಲಿ ಇಂದಿರಾ ಶರಣ, ಉದಯ ರವಿಕುಮಾರ, ಸುಜಾತಾ ಶಾಸ್ತ್ರಿ(ಮಹಾರಾಷ್ಟ್ರ), ನಂದನ, ಶಿವಪ್ರಸಾದ, ರೇಣುಕಾ ತಳವಾರ ಸೇರಿದಂತೆ ಸಾಕಷ್ಟು ಜನರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!