ವರ್ಗ ರಹಿತ ಸಮಾಜವೇ ಶರಣ ತತ್ವ: ಪ್ರೊ.ಡಾ.ಶೀಲಾದೇವಿ ಮಳಿಮಠ

363

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಶರಣರ ಪ್ರಕಾರ ತಳಸಮುದಾಯ, ಮೇಲ್ವರ್ಗ ಅನ್ನೋ ವಿಚಾರವೇ ಇಲ್ಲ. ವರ್ಗ ರಹಿತ ಸಮಾಜ ನಿರ್ಮಾಣ ಮಾಡುವುದೇ ಶರಣ ತತ್ವವಾಗಿದೆ ಎಂದು, ಬೆಂಗಳೂರಿನ ಬಿಎಂಎಸ್ ಮಹಿಳಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ.ಶೀಲಾದೇವಿ ಮಳಿಮಠ ಹೇಳಿದರು.

ಪ್ರಜಾಸ್ತ್ರ ವೆಬ್ ಪತ್ರಿಕೆ ವತಿಯಿಂದ ಆಯೋಜಿಸಿದ್ದ ‘ಎಚ್ಚರದ ಧ್ವನಿಯಾಗಿ ವಚನಕಾರರು’ ಅನ್ನೋ ವಿಷಯದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತ್ನಾಡಿದ ಅವರು, ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ಶ್ರರ್ಮಿಕ ವರ್ಗದವರಿದ್ದರು. ತಮ್ಮ ಕಾಯಕದೊಂದಿಗೆ ಸಮಸಮಾಜ ನಿರ್ಮಾಣ ಮಾಡಲು ಬದುಕಿನ್ನುದ್ದಕ್ಕೂ ಹೋರಾಟ ಮಾಡಿದ್ರು ಎಂದರು.

ಬಸವಣ್ಣ, ಅಲ್ಲಮಪ್ರಭು, ಮಡಿವಾಳ ಮಾಚಿದೇವರ ಜೊತೆ ಜೊತೆಯಾಗಿ ರಮ್ಮೆವ್ವ, ಕಾಳೆವ್ವ, ಆಯ್ದಕ್ಕಿ ಮಾರಯ್ಯ ದಂಪತಿ, ಸತ್ಯಕ್ಕ, ಸುಂಕದ ಬಂಕಣ್ಣನಂತಹ ವಚನಕಾರರು ಸಹ ಎಚ್ಚರದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಹೀಗಾಗಿಯೇ ವರ್ಗ ರಹಿತ ಸಮಾಜದ ಪರಿಕಲ್ಪನೆಯನ್ನ ಶರಣರು ಕಟ್ಟಿಕೊಟ್ಟರು ಅಂತಾ ಹೇಳಿದರು.

ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ಡಾ.ವಿಜಯಶ್ರೀ ಹಿರೇಮಠ, ಡಾ.ಸುಮಾ, ಡಾ.ಜಯಶ್ರೀ ಒಡೆಯರ್, ಸಿದ್ಧಲಿಂಗಯ್ಯ ದೊಬ್ಬಾ, ಪುಟ್ಟಗಂಗಯ್ಯ ಸೇರಿದಂತೆ ಅನೇಕರು ಪ್ರಶ್ನೆಗಳನ್ನ ಕೇಳಿದರು. ರಾಜಶೇಖರ ಶೆಟ್ಟಿ, ಶಬ್ಬೀರ್ ಸೂಡಿ, ವೀರೇಶ ಅಡಕಿ, ಗ್ಯಾನಪ್ಪ ಹೆಚ್, ಕುಸುಮಾ ಸಿ.ಆರ್, ಮಲ್ಲು ಹಿರೋಳ್ಳಿ, ರೇಣುಕಾ ತಳವಾರ, ಗೌರಿ ಹಿರೋಳ್ಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ 30ಕ್ಕೂ ಹೆಚ್ಚು ಜನರು ಭಾಗವಹಿಸಿದ್ರು. ಪ್ರಜಾಸ್ತ್ರ ವೆಬ್ ಪತ್ರಿಕೆಯ ಸಂಪಾದಕ ನಾಗೇಶ ತಳವಾರ ಕಾರ್ಯಕ್ರಮ ನಡೆಸಿಕೊಟ್ಟರು.




Leave a Reply

Your email address will not be published. Required fields are marked *

error: Content is protected !!