ಬಜೆಟ್-2023: 5 ಗ್ಯಾರೆಂಟಿಗಳ ಜೊತೆಗೆ ಹೊಸ ಘೋಷಣೆಗಳೇನು ಗೊತ್ತಾ?

166

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 14ನೇ ಬಜೆಟ್ ಮಂಡಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ 5 ಗ್ಯಾರೆಂಟಿಗಳ ಜೊತೆಗೆ ಹೊಸದಾಗಿ ಯೋಜನೆಗಳನ್ನು ಘೋಷಿಸಿದ್ದಾರೆ. ಹೀಗಾಗಿ ಯಾವೆಲ್ಲ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ ಅನ್ನೋದು ಇಲ್ಲಿದೆ..

  • ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಗುತ್ತಿಗೆಯಲ್ಲಿ 1 ಕೋಟಿ ರೂ. ಮೀಸಲು
  • ಹಿಂದುಳಿದ ವರ್ಗಗಳ ಉದ್ಯಮಿಗಳಿಗೆ 20 ಕೋಟಿ ರೂ. ತನಕ ಶೇ.6ರ ಬಡ್ಡಿದರದಲ್ಲಿ ಸಾಲ
  • ಎಸ್​ಸಿಪಿ-ಟಿಎಸ್​ಪಿ ಅನುದಾನ 34 ಸಾವಿರ ಕೋಟಿ ರೂ.ಗಳಿಗೆ ಏರಿಕೆ
  • ಅಹಿಂದ, ಶೋಷಿತ ವರ್ಗಗಳಿಗೆ ವಿಶೇಷ ಕಾರ್ಯಕ್ರಮಗಳ ನಿರೀಕ್ಷೆ
  • ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ
  • ಪತ್ರಕರ್ತರ ಪಿಂಚಣಿ – 12 ಸಾವಿರಕ್ಕೆ, ಕುಟುಂಬ ಪಿಂಚಣಿ. 3 ರಿಂದ 6 ಸಾವಿರಕ್ಕೆ ಏರಿಕೆ
  • ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ಹೊಸ ಯೋಜನೆ ಘೋಷಣೆ
  • ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ
  • ಎನ್​ಪಿಎಸ್ ರದ್ಧತಿ ಬಗ್ಗೆ ಭರವಸೆ ಸಾಧ್ಯತೆ
  • ಕೃಷಿ ಭಾಗ್ಯ ಯೋಜನೆ ಮರು ಜಾರಿ
  • ಕೃಷಿ ಭಾಗ್ಯಕ್ಕೆ 200 ಕೋಟಿ ರೂ. ಮೀಸಲು
  • ಕೃಷಿ ಬೆಳೆ ವಿಮೆ ಜಾರಿಗೆ ಹಣ
  • ನೀರಾವರಿ ಯೋಜನೆಗಳಿಗೆ ಒತ್ತು
  • ಸಣ್ಣ ಪ್ರಮಾಣದಲ್ಲಿ ಖಾಲಿ ಹುದ್ದೆಗಳ ಭರ್ತಿ
  • ಪಶು ಭಾಗ್ಯ ಯೋಜನೆಯೂ ಮತ್ತೆ ಆರಂಭ
  • ಎಪಿಎಂಸಿಗಳ ಸುಧಾರಣೆ



Leave a Reply

Your email address will not be published. Required fields are marked *

error: Content is protected !!