ಅಧೀರನಾದ ಸಂಜು ಬಾಬಾ

373

ಕೆಜಿಎಫ್ ಚಾಪ್ಟರ್-2 ಶೂಟಿಂಗ್ ನಡೆದಿದ್ದು, ಚಿತ್ರ ತಂಡ ಅಧೀರ ಯಾರು ಅನ್ನೋದು ಸೋಮವಾರ ಹೇಳ್ತೀನಿ ಅಂದಿತ್ತು. ಅದ್ರಂತೆ ಇಂದು ಅಧೀರನ ಪೋಸ್ಟರ್ ರಿಲೀಸ್ ಮಾಡಿದೆ. ಬಾಲಿವುಡ್ ನಟ ಸಂಜಯ ದತ್ತ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆನೆ ಕೆಜಿಎಫ್ ಚಾಪ್ಟರ್-2ನಲ್ಲಿ ಸಂಜಯ ದತ್ತ, ರವಿನಾ ಟಂಡನ್ ನಟಿಸಲಿದ್ದಾರೆ ಅಂತಾ ಹೇಳಲಾಗಿತ್ತು. ಇದೀಗ ಬಿಟೌನ್ ಸಂಜು ಬಾಬಾನ ಎಂಟ್ರಿ ಆಗಿದೆ. ಕಳೆದ ಶನಿವಾರ ನಿರ್ದೇಶಕ ಪ್ರಶಾಂತ ನೀಲ ಈ ಬಗ್ಗೆ ಟ್ವೀಟ್ ಮಾಡಿದ್ರು. ಸೋಮವಾರ ಅಧೀರನ ಎಂಟ್ರಿಯಾಗುತ್ತೆ ಅಂತಾ. ಕಾರಣ, ಇಂದು ನಟ ಸಂಜಯ ದತ್ತ ಹುಟ್ಟು ಹಬ್ಬ. ಹೀಗಾಗಿ ಈ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಕೆಜಿಎಫ್ ಚಾಪ್ಟರ್-1ನಲ್ಲಿ ಅಧೀರನ ಹೆಸರು ಹೇಳಲಾಗಿತ್ತು. ಆತ ಯಾರು ಅನ್ನೋದು ತೋರಿಸಿರ್ಲಿಲ್ಲ. ಅದು ಇದೀಗ ರೀವಿಲ್ ಆಗಿದೆ. ಈ ಚಿತ್ರ ನಟ ಯಶ ಜೀವನದ ಬಿಗ್ ಹಿಟ್ ಮೂವಿ. ಅಲ್ದೇ, ಯಶ ನ್ಯಾಷನಲ್ ಸ್ಟಾರ್ ಆಗಲು ಕಾರಣವಾದ ಮೂವಿ. ಹೀಗಾಗಿ ಕೆಜಿಎಫ್ ಚಾಪ್ಟರ್-2 ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!