ಕೆಜಿಎಫ್ ಕೋಟೆಗೆ ‘ಅಧೀರ’ ಎಂಟ್ರಿ

480

ಸ್ಯಾಂಡಲ್ ವುಡ್ ಸೇರಿದಂತೆ ಪಂಚ ಭಾಷೆಗಳಲ್ಲಿ ಭರ್ಜರಿ ಸುದ್ದು ಮಾಡಿದ್ದ ಕೆಜಿಎಫ್ ಚಿತ್ರದ ಚಾಪ್ಟರ್ 2 ಶೂಟಿಂಗ್ ಹೈದ್ರಾಬಾದ್ ನಲ್ಲಿ ನಡೆದಿದೆ. ಈ ಕೋಟೆಗೆ ಇದೀಗ ‘ಅಧೀರ’ನ ಎಂಟ್ರಿಯಾಗಿದೆ. ರಾಕಿಂಗ್ ಸ್ಟಾರ್ ಯಶ ನಟನೆಯ ಕೆಜಿಎಫ್-1 ಸೂಪರ್ ಹಿಟ್ ಆಗಿತ್ತು. ಇದೀಗ ಅದರ ಮುಂದುವರಿದ ಭಾಗ ಶುರುವಾಗಿದೆ.

ಕೆಜಿಎಫ್-2ನಲ್ಲಿ ಬಾಲಿವುಡ್ ನಟ ಸಂಜಯ ದತ್ ವಿಲನ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಇದರ ಸುಳಿವು ಬಿಟ್ಟುಕೊಟ್ಟಿದ್ದ ನಿರ್ದೇಶಕ ಪ್ರಶಾಂತ ನೀಲ್ ಅವರು, ಅದ್ಯಾರು ಅನ್ನೋದು ಹೇಳಿರ್ಲಿಲ್ಲ. ಅಧೀರನ ಅರ್ಧಮುಖದ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಮೂಡಿಸಿದ್ರು. ಬಳಿಕ ಅದು ಬಿಟೌನ್ ನಟ ಸಂಜಯ ದತ್ ಅನ್ನೋದು ಅನೌನ್ಸ್ ಆಯ್ತು. ಇದೀಗ ಸಂಜು ಬಾಬಾನ ಎಂಟ್ರಿಯಿಂದ ಟೀಂನಲ್ಲಿ ಮತ್ತಷ್ಟು ಜೋಶ್ ಬಂದಿದೆ. ಈ ಬಗ್ಗೆ ನಿರ್ದೇಶಕರು ಟ್ವೀಟರ್ ನಲ್ಲಿ ಪೋಸ್ಟ್ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!