ನಾಳೆ ಬಿಗ್ ಸ್ಕ್ರೀನ್ ಮೇಲೆ ‘ಮರ್ಡರ್ ಮಿಸ್ಟರಿ’

410

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ ಹಲವು ಸಿನ್ಮಾಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ರಂಜಿಸಿದ್ದಾರೆ. ಮಂಗಳಮುಖಿಯಾಗಿ, ಅಂಧನಾಗಿ, ಫುಲ್ ಜಾಲಿ ಬಾಯ್ ಆಗಿ ಹೀಗೆ ಹಲವು ಪಾತ್ರಗಳಲ್ಲಿ ಮಿಂಚಿದ ನಟ ಇದೀಗ ಮರ್ಡರ್ ಮಿಸ್ಟರಿ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಸಂಚಾರಿ ವಿಜಯ ಅಭಿನಯದ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಅನ್ನೋ ಸಿನ್ಮಾದ ಬಗ್ಗೆ ಮಾತ್ನಾಡಿದ್ದಾರೆ. ಇದೇ ಶುಕ್ರವಾರ ರಿಲೀಸ್ ಆಗ್ತಿರುವ ಸಿನ್ಮಾ ಈ ವರ್ಷದ ಮೊದಲ ಚಿತ್ರವಿದು. ಪಾರಾನಾಯ್ಡ್ ಸ್ಕಿಜೋಫ್ರೀನಿಯಾ ಅನ್ನೋ ಮಾನಸಿಕ ಸಮಸ್ಯೆಯ ಕಥಾಹಂದರವನ್ನ ಇದು ಹೊಂದಿದೆ. ಟೈಟಲ್ ಕೇಳಿದವರು ಇದು ಕಾಮಿಡಿ ಅಂದುಕೊಂಡ್ರು. ಟ್ರೇಲರ್ ನೋಡಿದವರು ಹಾರರ್ ಥ್ರಿಲ್ಲರ್ ಅಂದುಕೊಂಡ್ರು. ಆದ್ರೆ, ಇದು ಮರ್ಡರ್ ಮಿಸ್ಟರಿ ಕಥೆ ಅಂತಾ ನಟ ವಿಜಯ ಹೇಳಿದ್ದಾರೆ. ವಿಜಯಗೆ ಜೊತೆಯಾಗಿ ನಟಿ ದುನಿಯಾ ರಶ್ಮಿ, ಮಯೂರಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!