3 ಸಾವಿರ ಸ್ಕ್ರೀನ್ ಗಳಲ್ಲಿ ‘ಕುರುಕ್ಷೇತ್ರ’

1110

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಸೇರಿದಂತೆ ಬಹುದೊಡ್ಡ ತಾರಾಗಣ ಇರುವ ಕುರುಕ್ಷೇತ್ರ ರಿಲೀಸ್ ಗೂ ಮೊದ್ಲೇ ಭರ್ಜರಿಯಾಗಿ ಸೌಂಡ್ ಮಾಡ್ತಿದೆ. ಆಗಸ್ಟ್ 9, ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ರಿಲೀಸ್ ಆಗ್ತಿದ್ದು, ಬರೋಬ್ಬರಿ 3 ಸಾವಿರ ಸ್ಕ್ರೀನ್ ಗಳಲ್ಲಿ ಮಹಾಕಾಳಗ ನಡೆಯಲಿದೆ. ಇನ್ನು ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗ್ತಿರುವ ಮೂವಿ ಹಿಂದೆ ಅವತರಣಿಕೆ ಡೇಟ್ ಮುಂದೆ ಹೋಗಿದೆ.

ಇದೇ ಮೊದಲ ಬಾರಿಗೆ ನಟ ದರ್ಶನ ನಟನೆಯ ಚಿತ್ರ ಹಿಂದಿಯಲ್ಲಿ ರಿಲೀಸ್ ಆಗ್ತಿದೆ. ಇದರ ಜೊತೆಗೆ ಹಿಂದಿ ಡಬ್ಬಿಂಗ್ ಹಕ್ಕು ಬರೋಬ್ಬರಿ 9ಕೋಟಿಗೆ ಖರೀದಿ ಮಾಡಲಾಗಿದೆ. ಸಾಮಾನ್ಯವಾಗಿ ಕನ್ನಡದ ಚಿತ್ರಗಳು ಹಿಂದಿಗೆ ಡಬ್ಬಿಂಗ್ ಆದಾಗ 3ರಿಂದ 4 ಕೋಟಿಗೆ ಮಾರಾಟವಾಗುತ್ತವೆ. ಹೀಗಾಗಿ ಕುರುಕ್ಷೇತ್ರ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ದೇಶ, ವಿದೇಶಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದು, ಡಿ ಬಾಸ್ ಅಭಿಮಾನಿಗಳು ಫುಲ್ ಜೋಶ್ ನಲ್ಲಿದ್ದಾರೆ.

ನಟ ದರ್ಶನ ಮಾರುಕಟ್ಟೆ ಬಾಲಿವುಡ್ ಅಂಗಳದಲ್ಲಿಯೂ ಇದೆ. ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗದೆ ಹೋದ್ರೂ, ಡಬ್ಬಿಂಗ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಹೀಗಾಗಿ ಕುರುಕ್ಷೇತ್ರ ಚಿತ್ರಕ್ಕೆ ಭಾರಿ ಬೇಡಿಕೆ ಬಂದಿದೆ. ಇನ್ನು ಈ ಚಿತ್ರದಲ್ಲಿ ನಟ ಅಂಬರೀಶ, ಅರ್ಜುನ ಸರ್ಜಾ, ರವಿಚಂದ್ರನ್, ಶಶಿಕುಮಾರ, ರವಿಶಂಕರ, ನಿಖಿಲ ಕುಮಾರಸ್ವಾಮಿ, ಶ್ರೀನಿವಾಸ ಮೂರ್ತಿ, ರಮೇಶ ಭಟ್, ಸೋನು ಸೋದ್, ಡ್ಯಾನಿಶ್ ಅಕ್ತರ ಸೈಫ, ಹರಿಪ್ರಿಯಾ, ಮೇಘನಾರಾಜ ಸೇರಿದಂತೆ ಬಹುದೊಡ್ಡ ಸ್ಟಾರ್ ನಟರು ನಟಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!