ಸಿನಿಮೋತ್ಸವಕ್ಕೆತೆರೆ: ಡಿ ಬಾಸ್ 2 ಚಿತ್ರಗಳಿಗೆ ಪ್ರಶಸ್ತಿ.. ಬೆಲ್ ಬಾಟಂ ಮೋಡಿ

366

ಬೆಂಗಳೂರು: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ತೆರೆ ಬಿದ್ದಿದೆ. ಈ ವೇಳೆ ಅತ್ಯುತ್ತಮ ಚಿತ್ರಗಳಿಗೆ ನೀಡುವ ಪ್ರಶಸ್ತಿಗಳ ಪಟ್ಟಿಯಲ್ಲಿ, ಕನ್ನಡ ಚಿತ್ರಗಳು ಸಹ ಸೌಂಡ್ ಮಾಡಿವೆ. ವರ್ಷದ ಜನಪ್ರಿಯ ಚಿತ್ರಗಳ ಪ್ರಶಸ್ತಿಯನ್ನ ನಟ ದರ್ಶನ ಅಭಿನಯದ ಕುರುಕ್ಷೇತ್ರ ಮೊದಲ ಸ್ಥಾನ, ನಟ ರಿಶಭ ಶೆಟ್ಟಿಯ ಬೆಲ್ ಬಾಟಂ 2ನೇ ಸ್ಥಾನ ಹಾಗೂ ದರ್ಶನ ನಟನೆಯ ಮತ್ತೊಂದು ಚಿತ್ರ ಯಜಮಾನ ಮೂರನೇ ಸ್ಥಾನ ಪಡೆದುಕೊಂಡಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅತ್ಯುತ್ತಮ ಚಿತ್ರವಾಗಿ ಹೇಮಂತರಾವ ನಿರ್ದೇಶನದ ಕವಲು ದಾರಿ, ಸಚಿನ ಶೆಟ್ಟಿ ನಿರ್ದೇಶನದ ಒಂದು ಶಿಕಾರಿಯ ಕತೆ, ದಯಾಳ್ ಪದ್ಮನಾಭ ನಿರ್ದೇಶನದ ರಂಗನಾಯಕಿ ಕ್ರಮವಾಗಿ ಪ್ರಶಸ್ತಿ ಪಡೆದುಕೊಂಡಿವೆ. ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿದೆ.

ಏಷ್ಯನ್ ಚಿತ್ರ ವಿಭಾಗದಲ್ಲಿ ಥಾಯ್ ಲ್ಯಾಂಡ್ ನ ಹ್ಯಾಪಿ ಓಲ್ಡ್ ಡೇಸ್ ಫಸ್ಟ್, ಭಾರತೀಯ ಸಿನ್ಮಾ ಸಾಲಿನಲ್ಲಿ ಪನ್ ಗ್ರನ್ ಮೂವಿ, ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನ ಬಿರಿಯಾನಿ ಹಾಗೂ  ದಿ ಸೀಡ್ ಚಿತ್ರಗಳು ಪಡೆದುಕೊಂಡಿವೆ. ರಾಜ್ಯಪಾಲ ವಜುಭಾಯಿ ವಾಲಾ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!