ಲಾಕ್ ಡೌನ್ ಎಫೆಕ್ಟ್: ಮೂರು ವರ್ಷದ ಕೂಸನ್ನ ಕಳೆದಕೊಂಡ ಹೆತ್ತವರು

407

ಜೆಹಾನಾಬಾದ್: ಬಿಹಾರನಲ್ಲಿ ನಡೆದ ಘಟನೆಯೊಂದು ಕಣ್ಣೀರು ತರಿಸುತ್ತೆ. ಯಾಕಂದ್ರೆ ಲಾಕ್ ಡೌನ್ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಆದ್ರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ಹೀಗಾಗಿ ಲಾಕ್ ಡೌನ್ ಎದುರಿಸಲೇಬೇಕು. ಇದರ ಪರಿಣಾಮ ಹೃದಯ ಹಿಂಡುವಂತ ಘಟನೆಗೆ ಸಾಕ್ಷಿಯಾಗಬೇಕಿದೆ.

ಗಿರಿರಾಜಕುಮಾರ ಎಂಬುವರ ಮೂರು ವರ್ಷದ ಮಗುವಿಗೆ ಎರಡು ದಿನಗಳ ಹಿಂದೆ ಅನಾರೋಗ್ಯ ಕಂಡು ಬಂದಿದೆ. ಹಳ್ಳಿಯಲ್ಲಿ ವೈದ್ಯರಿಗೆ ತೋರಿಸಿದ್ದಾರೆ. ಆದ್ರೂ ಕಡಮೆಯಾಗಿಲ್ಲ. ಅನಾರೋಗ್ಯ ಹೆಚ್ಚಾದಾಗ ಜೆಹಾನಾಬಾದ್ ಗೆ ಬಂದಿದ್ದಾರೆ. ಅದು ಯಾವುದೇ ವಾಹನ ಸಿಗದೆ, ಅವರಿವರ ಕೈ ಕಾಲು ಬಿದ್ದು ಹೇಗೋ ಟೆಂಪೋವೊಂದು ತೆಗೆದುಕೊಂಡು ಬಂದಿದ್ದಾರೆ.

ಇಲ್ಲಿಗೆ ಬಂದ್ಮೇಲೆ ಸದರ್ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ಪಾಟ್ನಾ ಮೆಡಿಕಲ್ ಕಾಲೇಜಿಗೆ ಹೋಗಿ ಎಂದಿದ್ದಾರೆ. ಆದ್ರೆ, ಅವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ. ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಗಾಡಿಗಳು ರೋಡಿಗೆ ಇಳಿಯೋದು ಕಷ್ಟಸಾಧ್ಯ. ಹೀಗಾಗಿ ಮಗು ಮೃತಪಟ್ಟಿದೆ ಎಂದು ಹೆತ್ತವರು ಹೇಳಿರುವ ವಿಡಿಯೋ ನೋಡಿದ ಪ್ರತಿಯೊಬ್ಬರಿಗೆ ಹೃದಯ ಹಿಂಡಿದಂತಾಗುತ್ತೆ. ಅಲ್ದೇ, ಮಗುವಿನ ಮತೃದೇಹವನ್ನ ಹೆತ್ತವರು ಹೊತ್ತುಕೊಂಡು ಹೋಗುವ ದೃಶ್ಯ ಎಂತವರ ಕಣ್ಣುಗಳನ್ನು ಸಹ ತೇವಗೊಳಿಸುತ್ತೆ.

ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸದರ್ ಆಸ್ಪತ್ರೆಯ ವ್ಯವಸ್ಥಾಪಕನನ್ನ ಜಿಲ್ಲಾಧಿಕಾರಿಗಳು ಅಮಾನತು ಮಾಡಿದ್ದಾರೆ. ಕೆಲವು ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಆ್ಯಂಬುಲೆನ್ಸ್ ಸೇವೆ ನೀಡದಿರುವುದರ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!