ಪ್ರಜಾಸ್ತ್ರ ಸುದ್ದಿ
ಗಾಂಧಿನಗರ: ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಾಧವ ಸಿಂಗ್ ಸೋಲಂಕಿ ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ. 94 ವರ್ಷದ ಸೋಲಂಕಿ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
1980ರಲ್ಲಿ ಕ್ಷತ್ರೀಯ, ಹರಿಜನ, ಆದಿವಾಸಿ ಹಾಗೂ ಮುಸ್ಲಿಂ ಸೂತ್ರದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿದರು. 1981ರಲ್ಲಿ ಗುಜರಾತ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಅಲ್ದೇ, ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿಯೂ ಕೆಲಸ ಮಾಡಿದ್ರು.