ಸಿಂದಗಿಯಲ್ಲಿ ಅದ್ಧೂರಿಯಾಗಿ ಮಣ್ಣೆತ್ತು ವಿಸರ್ಜನೆ

472

ಸಿಂದಗಿ: ಐದು ದಿನಗಳ ಹಿಂದೆ ಪಟ್ಟಣದ ಹಲವು ಕಡೆ ಪ್ರತಿಷ್ಠಾಪನೆ ಮಾಡಿದ್ದ ಮಣ್ಣೆತ್ತಿನ ಮೂರ್ತಿಗಳನ್ನ ಇಂದು ಅದ್ಧೂರಿಯಾಗಿ ವಿಸರ್ಜನೆ ಮಾಡಲಾಯ್ತು. ಪಟ್ಟಣದ  ಮಲ್ಲಿಕಾರ್ಜುನ ದೇವಸ್ಥಾನ, ನೀಲಗಂಗಾ ದೇವಸ್ಥಾನ ಹಾಗೂ ಲೋಣಿ ಏರಿಯಾದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಮಣ್ಣೆತ್ತಿನ ಮೂರ್ತಿಗಳನ್ನ ವಿಸರ್ಜನೆ ಮಾಡಲಾಯ್ತು.

ಗಣೇಶನನ್ನ ಪ್ರತಿಷ್ಠಾಪನೆ ಮಾಡಿ ಪೂಜಿಸುವ ರೀತಿಯಲ್ಲಿಯೇ, ಮಣ್ಣೆತ್ತುಗಳನ್ನ ಐದು ದಿನಗಳ ಕಾಲ ಪ್ರತಿಷ್ಠಾಪಿಸಿ ಪೂಜೆ ಮಾಡಿ, ವಿಸರ್ಜನೆ ಮಾಡುವ ಸಂಪ್ರದಾಯ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿದೆ. ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು. ಹೀಗಾಗಿ ಇಂದು ಸಿಂದಗಿ ಪಟ್ಟಣದ ವಿವಿಧ ಕಡೆ ಪ್ರತಿಷ್ಠಾಪನೆ ಮಾಡಿದ್ದ ಮಣ್ಣೆತ್ತುಗಳನ್ನ ಬೀಳ್ಕೊಡಲಾಯ್ತು.

ನೀಲಗಂಗಮ್ಮಾ ದೇವಸ್ಥಾನದ ರಸ್ತೆಯ ಮೂಲಕ ಸಾಗಿ, ಹಳೆ ಕೋರ್ಟ್ ಸರ್ಕಲ್, ಶಾಂತವೀರ ಮಠದ ಮಾರ್ಗವಾಗಿ ವಿವೇಕಾನಂದ ಸರ್ಕಲ್ ಬಳಿ ಬರಲಾಯ್ತು. ಭರ್ಜರಿಯಾಗಿ ಡಿಜೆ ಸೌಂಡ್ ಮೂಲಕ ನೂರಾರು ಯುವಕರು ಸಖತ್ ಸ್ಟೆಪ್ಸ್ ಹಾಕಿದ್ರು. ಅಲ್ಲಿಂದ ಮುಂದೆ ಸಾಗಿ, ಕನಕದಾಸ ಸರ್ಕಲ್ ಮಾರ್ಗದ ಮೂಲಕ ತೆರಳಿ, ರೇಶ್ಮೆ ಇಲಾಖೆಯ ಸಮೀಪದಲ್ಲಿರುವ ಭಾವಿಯೊಂದರಲ್ಲಿ ವಿಸರ್ಜನೆ ಮಾಡಲಾಯ್ತು.




Leave a Reply

Your email address will not be published. Required fields are marked *

error: Content is protected !!