ಬೆಂಗಾಲಿ-ಪಂಜಾಬಿ ಸಲಿಂಗಿ ವೈದ್ಯರ ನಿಶ್ಚಿತಾರ್ಥ

623

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಹಲವು ದಿನಗಳಿಂದ ಸಲಿಂಗಿ ವೈದ್ಯ ಜೋಡಿಯ ಮದುವೆ ವಿಚಾರ ಚರ್ಚೆಯಾಗುತ್ತಿದೆ. ಈ ಇಬ್ಬರು ವೈದ್ಯರು ಮದುವೆಯಾಗುತ್ತಿದ್ದು, ಬೆಂಗಾಲಿ ಹಾಗೂ ಪಂಜಾಬಿ ಶೈಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಸಿವಿಲ್ ಯೂನಿಯನ್ ಎಂದು ಕರೆಯಲಾಗಿದೆ.

ನಾಗ್ಪುರದಲ್ಲಿ ಸಲಿಂಗಿಗಳ ನಿಶ್ಚಿತಾರ್ಥ ನಡೆದಿದೆ. ಗೋವಾದಲ್ಲಿ ಮದುವೆ ನಡೆಯಲಿದೆ. ಡಾ.ಸುರಭಿ ಮಿತ್ರ ಹಾಗೂ ಡಾ.ಪರೋಮಿತ ಮುಖರ್ಜಿ ಮದುವೆಯಾಗಲಿರುವ ಜೋಡಿ. ಇವರ ಎಂಗೇಜ್ಮೆಂಟ್ ಫೋಟೋಗಳು ವೈರಲ್ ಆಗಿವೆ.

ಕೊಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಸುರಭಿ ಹಾಗೂ ಪರೋಮಿತ ಪರಿಚಯವಾಗಿದೆ. ನಂತರ ಸೋಷಿಯಲ್ ಮೀಡಿಯಾ ಮೂಲಕ ಸ್ನೇಹ ಮುಂದುವರೆದಿದೆ. ಒಮ್ಮೆ ಸ್ನೇಹಿತರೊಂದಿಗೆ ಗೋವಾಗೆ ಹೋದಾಗ ಸುರಭಿ ತಮ್ಮ ಪ್ರೀತಿಯನ್ನು ಪರೋಮಿತಗೆ ಹೇಳಿದ್ದಾರೆ. ಹೀಗೆ ನಡೆದ ಇವರ ಕಥೆ ಮದುವೆಯ ಹಂತಕ್ಕೆ ಬಂದಿದೆ.




Leave a Reply

Your email address will not be published. Required fields are marked *

error: Content is protected !!