ಮೇಕೆದಾಟು: ಸರ್ವಾನುಮತದಿಂದ ಅಂಗೀಕಾರ

176

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೇಕೆದಾಟು ಯೋಜನೆ ನಿರ್ಮಾಣ ಹಾಗೂ ಇದನ್ನು ವಿರೋಧಿಸಿರುವ ತಮಿಳುನಾಡು ಸರ್ಕಾರದ ನಿರ್ಣಯವನ್ನು ವಿರೋಧಿಸುವುದು ಸೇರಿ ಮೂರು ಮಹತ್ವದ ನಿರ್ಣಯಗಳಿಗೆ ಸರ್ವಾನುಮತದಿಂದ ಅಂಗೀಕಾರವಾಗಿದೆ.

ನಿನ್ನ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ ನಿರ್ಣವನ್ನು ಇಂದು ಪರಿಷತ್ ನಲ್ಲಿ ಯಥಾವತ್ತಾಗಿ ಅಂಗೀಕರಿಸಲಾಯಿತು. ಕಾನೂನು ಮುತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಮಂಡಿಸಿದರು.

ಮೇಕೆದಾಟು ಯೋಜನೆಗೆ ಶೀಘ್ರ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯಕ್ಕೆ ಒತ್ತಾಯಿಸುವುದು. ಕಣಿವೆ ರಾಜ್ಯಗಳ ನ್ಯಾಯಸಮ್ಮತ ಪಾಲನ್ನು ನಿರ್ಧರಿಸುವವರೆಗೂ ಗೋದಾವರಿ, ಕೃಷ್ಣಾ, ಪೆನ್ನಾರ್, ಕಾವೇರಿ, ವೈಗಯ್, ಗುಂಡಾರ್ ಜೋಡಣೆ ಯೋಜನೆಯ ಡಿಪಿಆರ್‍ನ್ನು ಅಂತಿಮಗೊಳಿಸದಂತೆ ಹಾಗೂ ತಮಿಳುನಾಡಿನ ಕಾನೂನು ಬಾಹಿರ ಯೋಜನೆಗೆ ಅನುಮೋದನೆ ನೀಡದಂತೆ ಹಾಗೂ ಆ ಯೋಜನೆಗಳನ್ನು ಮುಂದುವರೆಸದಂತೆ ನಿರ್ದೇಶಿಸಲು ಸಂಬಂಧಪಟ್ಟ ಸಂಸ್ಥೆಗಳನ್ನು ಒತ್ತಾಯಿಸಲು ನಿರ್ಣಯದಲ್ಲಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!