ಸೇನಾ ಹೆಲಿಕಾಪ್ಟರ್ ದುರಂತ: ರಾಷ್ಟ್ರಪತಿ ಕಾರ್ಯಕ್ರಮ ರದ್ದು

392

ಪ್ರಜಾಸ್ತ್ರ ಸುದ್ದಿ

ನವದೆಹಲಿ: ತಮಿಳುನಾಡಿನ ಕೂನೂರು ಬಳಿಯ ನೀಲಿಗಿರಿ ಕಾಡಿನಲ್ಲಿ ಸೇನಾ ಹೆಲಿಕಾಪ್ಟರ್ ಎನ್ಐ 17 ಪತನಗೊಂಡ ಹಿನ್ನೆಲೆಯಲ್ಲಿ ದೇಶದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿದೆ. ಯಾಕಂದರೆ, ಇದರಲ್ಲಿ ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಸೇರಿ 14 ಅಧಿಕಾರಿಗಳಿದ್ದರು.

ಇದೀಗ ಈ ದುರಂತದಲ್ಲಿ 13 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೊಬ್ಬರ ಸ್ಥಿತಿಯು ಚಿಂತಾಜನಕವಾಗಿದೆಯಂತೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಬಗೆಗಿನ ಯಾವುದೇ ಮಾಹಿತಿ ಅಧಿಕೃತವಾಗಿ ಹೊರಬಿದ್ದಿಲ್ಲ. ಈ ಬಗ್ಗೆ ನಾಳೆ ಹೇಳಲಾಗುತ್ತೆ ಎಂದು ತಿಳಿಸಲಾಗಿದೆ. ಈಗ ನಾಳೆ ನಿಗದಿಯಾಗಿದ್ದ ರಾಷ್ಟ್ರಪತಿ ಅವರ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!