‘ಹೊಡೆದರೆ ಹೊಡೆಯಿರಿ’, ಈಶ್ವರಪ್ಪ ಹೇಳಿಕೆಯ ಸಂದೇಶ ಏನು?

269

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಒಂದು ಕಾಲದಲ್ಲಿ ನಮಗೆ ಶಕ್ತಿ ಇರ್ಲಿಲ್ಲ. ಹೀಗಾಗಿ ಹೊಡೆದರೆ ಹೊಡಿಸಿಕೊಳ್ಳುತ್ತಿದ್ದೇವು. ಈಗ ಬದಲಾಗಿದೆ. ಬಿಜೆಪಿ ಹೇಗೆ ಬೆಳೆದಿದೆ ಅನ್ನೋದು ಜಗತ್ತಿಗೆ ಗೊತ್ತಿದೆ. ಯಾವುದರಲ್ಲಿ ಹೊಡೆಯುತ್ತಾರೋ ಅದರಲ್ಲೇ ಹೊಡೆಯಿರಿ ಎಂದು ಹೇಳಿದ ಮಾತನ್ನ ಸಮರ್ಥಿಸಿಕೊಂಡಿದ್ದಾರೆ.

ನಮ್ಮ ಹಿರಿಯರು ಹೇಳಿದ್ದ ಮಾತನ್ನ ಹೇಳುತ್ತಿದ್ದೇನೆ. ಅದನ್ನ ನಾನು ಹೇಳಿದ್ದಲ್ಲ. ಅಂದು ತಾಳ್ಮೆಯಿಂದ ಇರಿ ಎಂದಿದ್ರು. ಇಂದು ಫೇಸ್ ವಿತ್ ದಿ ಸೇಮ್ ಸ್ಟಿಕ್ ಎಂದು ಹಿರಿಯರು ಹೇಳಿದ್ದಾರೆ. ಅದನ್ನು ಉಲ್ಲೇಖ ಮಾಡುತ್ತಿದ್ದೇನೆ. ಹೊರತು ನಾನು ಹೇಳಿದಲ್ಲ ಎನ್ನುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

ಈ ಮಾತುಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಮಾಜಕ್ಕೆ ಏನು ಸಂದೇಶ ನೀಡುತ್ತದೆ. ಸಮಾಜದಲ್ಲಿ ಶಾಂತಿ ಕದಡುವ ವಾತಾವರಣ ನಿರ್ಮಾಣವಾಗಲ್ವಾ? ಅವರ ಮಾತಿನಿಂದ ಯುವ ಜನತೆಗೆ ಹೊಡಿ ಬಡಿ, ಕೊಲೆ ಅನ್ನೋ ಮಟ್ಟಕ್ಕೆ ಹೋದರೆ ಯಾರು ಹೊಣೆ? ಯಾರಿಗೆ ತೊಂದರೆ ಅನ್ನೋ ಹಲವು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!