ಸರ್ಕಾರಿ ಜಾಗ ಕಬಳಿಸುವಲ್ಲಿ ಮನಗೂಳಿ ಎತ್ತಿದ ಕೈ: ಭೂಸನೂರ

503

ಸಿಂದಗಿ: ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಸರ್ಕಾರಿ ಜಾಗಗಳನ್ನ ಕಬಳಿಸುವಲ್ಲಿ ಶಾಸಕ ಎಂ.ಸಿ ಮನಗೂಳಿ ಎತ್ತಿದ ಕೈ ಎಂದು ಮಾಜಿ ಶಾಸಕ ರಮೇಶ ಭೂಸನೂರು ಗಂಭೀರ ಆರೋಪ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಭೂಸನೂರು ಅಡ್ಡಿಪಡಿಸ್ತಿದ್ದಾರೆ ಅನ್ನೋ ಶಾಸಕರ ಆರೋಪಕ್ಕೆ ಸಂಬಂಧಿಸಿದಂತೆ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ರೀತಿ ಆರೋಪಿಸಿದ್ರು.

ಶಾಸಕರು ಮಾಡಿರುವ ಆರೋಪಕ್ಕೆ ಪೂರಕ ದಾಖಲೆಗಳು ಇದ್ರೆ ಬಹಿರಂಗ ಪಡಿಸಲಿ. ನಾನು ಅಭಿವೃದ್ಧಿ ಕೆಲಸಗಳಿಗೆ ನಿಮ್ಮ ಜೊತೆ ಇರ್ತಿನಿ ಅಂತಾ ಹೇಳಿದ ಅವರು, ಅಧಿಕಾರ ದುರ್ಬಳಕೆ ಮಾಡ್ಕೊಂಡು ಎಪಿಎಂಸಿ ಬಳಿಯಿರುವ ಸರ್ಕಾರಿ ಕಟ್ಟಡ ಕಡವಿದ್ದಾರೆ ಅಂತಾ ಆರೋಪಿಸಿದ್ರು.

ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಶಾಸಕ ಮನಗೂಳಿ ಅವರು ಜಾಗಗಳನ್ನ ಕಬಳಿಸುವ ಕೆಲಸ ಮಾಡ್ತಿದ್ದಾರೆ ಅಂತಾ ಆರೋಪಿಸಿದ ಮಾಜಿ ಶಾಸಕರು, ದಾನ ಕೊಟ್ಟಿದ್ದ ಜಾಗಗಳನ್ನ ಫ್ಲಾಟ್ ಮಾಡಿ ಮಾರಾಟ ಮಾಡಿಕೊಂಡಿದ್ದಾರೆ. ಇದೇ ರೀತಿ ಮಿನಿಸೌಧ ಸ್ಥಳಾಂತರ ಮಾಡುವ ಮೂಲಕ ತಹಶೀಲ್ದಾರ್ ಕಚೇರಿಯ ಜಾಗವನ್ನೂ ಕಬಳಿಸುವ ಹುನ್ನಾರವಿದೆ ಅಂತಾ ನೇರವಾಗಿ ಆರೋಪಿಸಿದ್ದಾರೆ.

”ಶಾಸಕ ಎಂ.ಸಿ ಮನಗೂಳಿ ಬಿಜೆಪಿ ಕಚೇರಿಯ ಬಾಗಿಲು ಬಡೆಯುತ್ತಿದ್ದಾರೆ. ಮುಂದಿನ ಸಾರಿ ಸೋಲಿನ ಭೀತಿಯಿಂದ ಬಿಜೆಪಿ ಕಚೇರಿಯ ಬಾಗಿಲು ಬಡೆಯುತ್ತಿದ್ದು, ಸಿಂದಗಿಯಲ್ಲಿ ಅದರ ಅವಶ್ಯಕತೆಯಿಲ್ಲವೆಂದು ನಮ್ಮ ನಾಯಕರು ಹೇಳಿದ್ದಾರೆ”.

500 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಅಂತಾ ಹೇಳಿದ್ದಾರೆ. ಎಲ್ಲಿ 500 ಕೋಟಿ ಲಾರಿಯಲ್ಲಿ ಬರ್ತಿದ್ಯಾ ಅಂತಾ ವ್ಯಂಗ್ಯವಾಡಿದ್ರು. ಕೇವಲ ಆಡಳಿತಾತ್ಮಕ ಮಂಜೂರಿಯಾಗಿದೆ. ಬಜೆಟ್ ನಲ್ಲಿ ಎಷ್ಟು ಇಡಲಾಗಿದೆ ಕೇಳಿ. ಬರೀ ಪೇಪರ್ ನಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಟೆಂಡರ್ ನಲ್ಲಿ ರೊಕ್ಕ ಹೊಡೆಯುವ ಕೆಲಸ ಮಾಡ್ತಿದ್ದಾರೆ. ಎಲ್ಲದರಲ್ಲೂ ತಂದೆ, ಮಗನ ಹಸ್ತಕ್ಷೇಪ ಇರುತ್ತೆ. ಇದ್ರಿಂದಾಗಿ ತಾಲೂಕಿನ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ ಅಂತಾ ಆರೋಪಿಸಿದ್ರು.

”ಒಳಚರಂಡಿ ವ್ಯವಸ್ಥೆ, ಮಿನಿ ವಿಧಾನಸೌಧ, ಕಡಣಿ ಬ್ರಿಡ್ಜ್ ಹಾಗೂ ತೋಟಗಾರಿಕೆ ಇಲಾಖೆಯ ಕೆಲಸ ಮೊದಲು ಆಗಬೇಕು. ಶಾಸಕರು ನಿಯೋಗ ಕರೆದ್ರೆ ನಾನು ಬರ್ತಿನಿ. ಪುರಸಭೆ ಚುನಾವಣೆ ಸಹ ಮಾಡ್ತಿಲ್ಲ. ಜನಪ್ರತಿನಿಧಿಗಳು ಇಲ್ಲಂದ್ರೆ ಶಾಸಕರು ಅಧ್ಯಕ್ಷರಾಗಿರ್ತಾರೆ. ದಿನಕೊಂದು ಗುದ್ಲಿ ಪೂಜೆ ಮಾಡ್ಕೊಂಡು ಹೋಗಬಹುದು”.

ಗ್ರಾಮ ವಿಕಾಸ ಯೋಜನೆಯಲ್ಲಿ ಏಳು ಹಳ್ಳಿಗಳಲ್ಲಿ ಇದುವರೆಗೂ ಕೆಲಸಗಳು ಪ್ರಾರಂಭವಾಗ್ತಿಲ್ಲ. ಅದು ಅಲ್ದೇ ಅನುಮೋದನೆಯಾಗಿದ್ದ ನನ್ನ 90 ಲಕ್ಷ ರೂಪಾಯಿ ಅನುದಾನ ಚೇಂಜ್ ಮಾಡಿ ವರ್ಗಾವಣೆಗೊಳಿಸಿದ್ದಾರೆ ಅಂತಾ ಹೇಳಿದ್ರು. ಇನ್ನೂ ಮಾಜಿ ಪ್ರಧಾನಿ ಹಾಗೂ ಅವರ ಮೂರ್ತಿಯನ್ನ ಸುಟ್ಟುವರು ಯಾರು ಅನ್ನೋದು ತನಿಖೆ ಯಾಕೆ ಮಾಡ್ಲಿಲ್ಲ. ಅವರಿಗೆ ನೈತಿಕತೆಯಿದ್ರೆ ಸತ್ಯಾಂಶ ಹೊರಬರುವಂತೆ ಮಾಡಲಿ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!