ನಾನು ಯಾವಾಗ ನಿವೃತ್ತಿ ಆಗ್ತೀನಿ ನನ್ಗೆ ಗೊತ್ತಿಲ್ಲ: ಧೋನಿ

351

ಲಂಡನ್: ಇಂಡಿಯನ್ ಕ್ರಿಕೆಟ್ ಟೀಂನ ಹಿರಿಯ ಆಟಗಾರ ಎಂ.ಎಸ್ ಧೋನಿ ನಿವೃತ್ತಿ ಬಗ್ಗೆ ಗುಸುಗುಸು ಶುರುವಾಗಿದೆ. ಆದ್ರೆ, ಮಾಹಿ ಇದನ್ನ ಅಲ್ಲಗಳೆದಿದ್ದಾರೆ. ನಾನು ಯಾವಾಗ ನಿವೃತ್ತಿ ಆಗುತ್ತೇನೆ ಅನ್ನೋದು ನನ್ಗೆ ಗೊತ್ತಿಲ್ಲ ಅಂತಾ ಮಾಜಿ ಕ್ಯಾಪ್ಟನ್ ಹೇಳಿದ್ದಾರೆ ಅನ್ನೋದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

2019ರ ವರ್ಲ್ಡ್ ಕಪ್ ಬಳಿಕ ಎಂಎಸ್ ಡಿ ಬ್ಲೂ ಜೆರ್ಸಿ ತೊಟ್ಟುಕೊಳ್ಳುವುದಿಲ್ಲ. ಈ ಟೂರ್ನಿ ಮುಗಿಯುತ್ತಿದ್ದಂತೆಯೇ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ ಅಂತೆಲ್ಲ ಸುದ್ದಿಯಾಗ್ತಿದೆ. ಇದ್ರಿಂದಾಗಿ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರ ಮೂಡಿದೆ. ಆದ್ರೆ, ಪ್ರಮುಖ ಸುದ್ದಿಸಂಸ್ಥೆಯೊಂದರ ಮಾಹಿತಿ ಪ್ರಕಾರ, ಧೋನಿ ಟೀಂ ಇಂಡಿಯಾದಲ್ಲಿ ಮುಂದುವರೆಯುತ್ತಾರಂತೆ.

ನಾನು ನಿವೃತ್ತಿಯಾಗಬೇಕು ಅನ್ನೋದು ಬಹಳ ಜನಕ್ಕೆ ಬೇಕಾಗಿದೆ ಅಂತಾ ಧೋನಿ ಹೇಳಿದ್ದಾರಂತೆ. ಆದ್ರೆ, ಅದು ಇಂಡಿಯನ್ ಟೀಂ ಆಡಳಿತ ಮಂಡಳಿಗಲ್ಲ. ಯಾರು ಧೋನಿ ನಿವೃತ್ತಿಯನ್ನ ಬಯಸುತ್ತಿದ್ದಾರೋ ಅಂಥಹ ಜನ ಹಾಗೂ ಮಾಧ್ಯಮಗಳೆಂದು ಹೇಳಲಾಗ್ತಿದೆ. ಹೀಗಿದ್ರೂ ವರ್ಲ್ಡ್ ಕಪ್ ಮುಗಿದ ಮೇಲೆ ಧೋನಿ ನಿವೃತ್ತಿ ಘೋಷಣೆ ಮಾಡ್ತಾರೋ.. ಮುಂದುವರೆಯುತ್ತಾರೋ ಅನ್ನೋ ಕುತೂಹಲ ಮಾತ್ರವಿದೆ.


TAG


Leave a Reply

Your email address will not be published. Required fields are marked *

error: Content is protected !!