ಜಾತಿ ‘ವಿಷ’ಕ್ಕೆ ವೈದ್ಯೆ ಸೂಸೈಡ್!

448

ಮುಂಬೈ: ಸೀನಿಯರ್ ಗಳ ಕಿರುಕುಳದಿಂದ ಮನನೊಂದ 26 ವರ್ಷದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. 26 ವರ್ಷದ ಪಾಯಲ್ ತದ್ವಿ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯಾಗಿದ್ದಾಳೆ.

ಜಲ್ಗಾಂವ್ ಜಿಲ್ಲೆಯ ವೈದ್ಯೆ ಪಾಯಲ್ ತದ್ವಿ, ಸ್ತ್ರೀರೋಗ ತಜ್ಞೆ ಅಧ್ಯಯನಕ್ಕಾಗಿ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿಗೆ 2018ರಲ್ಲಿ ಸೇರಿಕೊಂಡಿದ್ದಳು. ಕೆಲ ತಿಂಗಳುಗಳಿಂದ ಇಲ್ಲಿನ ಸೀನಿಯರ್ಸ್ ಪಾಯಲ್ ಗೆ ಜಾತಿ ನಿಂದನೆ ಮೂಲಕ ಕಿರುಕುಳ ಕೊಡಲು ಶುರು ಮಾಡಿದ್ರಂತೆ. ಈ ಬಗ್ಗೆ ಆಕೆ ತನ್ನ ಹೆತ್ತವರ ಬಳಿ ಹಾಗೂ ಪತಿ ಬಳಿ ಹೇಳಿದ್ದಳಂತೆ.

ಮಗಳಿಗೆ ಕಿರುಕುಳ ನೀಡ್ತಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಆಕೆಯ ಹೆತ್ತವರು ಮತ್ತು ಪತಿ ಕಾಲೇಜು ಆಡಳಿತ ಮಂಡಳಿಗೆ ದೂರ ಸಹ ನೀಡಿದ್ದಾರೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದ ಕಾಲೇಜು ಆಡಳಿತ ಮಂಡಳಿ ಸುಮ್ಮನಾಗಿದೆ. ಹೀಗಾಗಿ ಪಾಯಲ್ ಗೆ ಕಿರುಕುಳ ಕೊಡುವುದು ಮುಂದುವರೆದಿದೆ. ಇದರಿಂದ ನೊಂದ ವೈದ್ಯೆ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!